Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಒಪ್ಪದ ಮಗನ ಮೇಲೆ ತಾಯಿ ಎಸಗಿದ್ದಾಳೆ ಇಂತಹ ಘೋರ ಕೃತ್ಯ

ಅಕ್ರಮ ಸಂಬಂಧ ಒಪ್ಪದ ಮಗನ ಮೇಲೆ ತಾಯಿ ಎಸಗಿದ್ದಾಳೆ ಇಂತಹ ಘೋರ ಕೃತ್ಯ
ನವದೆಹಲಿ , ಮಂಗಳವಾರ, 29 ಜನವರಿ 2019 (08:18 IST)
ನವದೆಹಲಿ : ಅಕ್ರಮ ಸಂಬಂಧ ಒಪ್ಪದ ಮಗನನ್ನು ಲವರ್ ಜೊತೆ ಸೇರಿ ತಾಯಿನೇ ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಹೊಸ ಅಶೋಕ್ ನಗರದಲ್ಲಿ ನಡೆದಿದೆ.

ರವೀಂದರ್ ಪಾಠಕ್ ಮೃತಪಟ್ಟ ಮಗ. ವೃತ್ತಿಯಲ್ಲಿ ಚಾಲಕನಾಗಿರುವ ಈತ ತನ್ನ ತಾಯಿ ಮತ್ತು ಆಕೆಯ ಸ್ನೇಹಿತ ಅಜಿತ್ ಜೊತೆ ಬಾಡಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದನು. ಆದರೆ ಶನಿವಾರ ರಾತ್ರಿ ಆತ ಕೆಲಸ ಮುಗಿಸಿ ಮನೆಗೆ ಬಂದಾಗ ತನ್ನ ತಾಯಿ ಆಕೆಯ ಸ್ನೇಹಿತ ಅಜಿತ್ ಜೊತೆ ಅನೈತಿಕ ಸಂಬಂಧ ಹೊಂದಿರುವುದ್ದನ್ನು ನೋಡಿದ್ದಾನೆ. ಇದರಿಂದ ಮೂವರ ಮಧ್ಯೆ ಜಗಳ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ತಾಯಿ ಮತ್ತು ಸ್ನೇಹಿತ ಇಬ್ಬರು ಇಟ್ಟಿಗೆಯಿಂದ ಪಾಠಕ್ ತಲೆಗೆ ಹೊಡೆದಿದ್ದಾರೆ. ಪರಿಣಾಮ ಪಾಠಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

 

ತಕ್ಷಣ ಆರೋಪಿಗಳು ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಲ್ಲಿಗೆ ಬಂದ ಅಂಬುಲೆನ್ಸ್ ಚಾಲಕ ಪಾಠಕ್ ನನ್ನು ಕಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನದಿಂದ  ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ  ತಾಯಿ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಭೂಗತ ಪಾತಕಿ ದಾವೂದ್ ಹೆಸರಿನಲ್ಲಿ ಹಣಕ್ಕಾಗಿ ಉದ್ಯಮಿಗೆ ವಾಟ್ಸಾಪ್ ನಲ್ಲಿ ಕೊಲೆ ಬೆದರಿಕೆ