Select Your Language

Notifications

webdunia
webdunia
webdunia
webdunia

ಭೂಗತ ಪಾತಕಿ ದಾವೂದ್ ಹೆಸರಿನಲ್ಲಿ ಹಣಕ್ಕಾಗಿ ಉದ್ಯಮಿಗೆ ವಾಟ್ಸಾಪ್ ನಲ್ಲಿ ಕೊಲೆ ಬೆದರಿಕೆ

ಭೂಗತ ಪಾತಕಿ ದಾವೂದ್ ಹೆಸರಿನಲ್ಲಿ ಹಣಕ್ಕಾಗಿ ಉದ್ಯಮಿಗೆ ವಾಟ್ಸಾಪ್ ನಲ್ಲಿ ಕೊಲೆ ಬೆದರಿಕೆ
ಬೆಂಗಳೂರು , ಮಂಗಳವಾರ, 29 ಜನವರಿ 2019 (08:16 IST)
ಬೆಂಗಳೂರು : ಮೋಸ್ಟ್ ವಾಟೆಂಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ದುಷ್ಕರ್ಮಿಗಳು ವಾಟ್ಸಾಪ್ ನಲ್ಲಿ ಉದ್ಯಮಿಯೋಬ್ಬರಿಗೆ ಹಣದ ಬೇಡಿಕೆ ಇಟ್ಟು ಕೊಡದಿದ್ದರೆ ಕುಟುಂಬದ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಅಶ್ವಿನಿ ಅಗರ್ ವಾಲ್(57) ಎಂಬುವವರು ಎಎಸ್ ​ಸಿ ಸೆಂಟರ್​ನಲ್ಲಿ ಮಿಲಿಟರಿ ಕ್ಯಾಂಟಿನ್ ನಡೆಸುತ್ತಿದ್ದು, ಜ.25 ಬೆಳಗ್ಗೆ ಕಿರಾತಕರು ವಾಟ್ಸಾಪ್ ಮಾಡಿ, ನಾವು ದಾವೂದ್ ಇಬ್ರಾಹಿಂ ತಂಡದವರು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದೇವೆ. ಒಂದು ಕೋಟಿ ರೂ. ಹಣ ನೀಡದಿದ್ದರೆ‌ ನಿಮ್ಮ ಕುಟುಂಬದ ಸದಸ್ಯರನ್ನು ಸಾಯಿಸುವುದಾಗಿ ಮೆಸೇಜ್ ಮಾಡಿದ್ದರು.

 

ಈ ಬಗ್ಗೆ ಅಶ್ವಿನ್ ಅಗರ್​ವಾಲ್ ವಿವೇಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ತಮ್ಮ ದಾರಿ ತಾವು ನೋಡಿಕೊಳ್ಳುವುದು ಸೂಕ್ತ ಎಂದು ಬಸವರಾಜ್ ಹೊರಟ್ಟಿ ಹೇಳಿದ್ಯಾಕೆ?