Select Your Language

Notifications

webdunia
webdunia
webdunia
webdunia

ಲವರ್ ಜೊತೆ ಓಡಿಹೋಗಲು ಯತ್ನಿಸಿದ ಮಹಿಳೆಗೆ ಪತಿಯ ಸಂಬಂಧಿಕರು ವಿಧಿಸಿದ ಶಿಕ್ಷೆ ಏನು ಗೊತ್ತಾ?

ಲವರ್ ಜೊತೆ ಓಡಿಹೋಗಲು ಯತ್ನಿಸಿದ ಮಹಿಳೆಗೆ ಪತಿಯ ಸಂಬಂಧಿಕರು ವಿಧಿಸಿದ ಶಿಕ್ಷೆ ಏನು ಗೊತ್ತಾ?
ಗುಜರಾತ್ , ಸೋಮವಾರ, 28 ಜನವರಿ 2019 (07:07 IST)
ಗುಜರಾತ್ : ಲವರ್ ಜೊತೆ ಓಡಿಹೋಗಲು ಯತ್ನಿಸಿದ ಮಹಿಳೆಯ ಮೇಲೆ ಆಕೆಯ ಪತಿಯ ಸಂಬಂಧಿಕರೇ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಗುಜರಾತಿನ ಅಹಮದಾಬಾದಿನ ಸಮೀಪದ ನಾನಿಕ್ರಾಜ್ ಗ್ರಾಮದಲ್ಲಿ ನಡೆದಿದೆ.

ಸಂತ್ರಸ್ತೆಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳು ಕೂಡ ಇದ್ದರು. ಆದರೆ ಅದೇ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಆಕೆ, ತನ್ನ ಪತಿ ಮತ್ತು ಮಕ್ಕಳನ್ನು ಬಿಟ್ಟು ಲವರ್ ಜೊತೆ ಓಡಿ ಹೋಗಲು ಯೋಚಿಸಿದ್ದಾಳೆ. ಈ ವಿಚಾರ ತಿಳಿದ ಪತಿಯ ಸಂಬಂಧಿಕರು ಏಳು ಜನ ಸೇರಿಕೊಂಡು ಇಬ್ಬರನ್ನು ಹಿಡಿದು ಅವರ ಮೇಲೆ ಹಲ್ಲೆ ಮಾಡಿ ಸಂತ್ರಸ್ತೆಯ ಕೂದಲನ್ನು ಕತ್ತರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪಾಪಿಗಳು ಐದು ಮಂದಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

 

ಆರೋಪಿಗಳು ಅತ್ಯಾಚಾರದ ದೃಶ್ಯವನ್ನು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ತನಿಖೆ ಕೈಗೊಂಡು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಕೊಂದ ಪತಿ ಮೃತದೇಹವನ್ನು ಮಾಡಿದ್ದೇನು ಗೊತ್ತಾ?