Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಕೊಂದ ಪತಿ ಮೃತದೇಹವನ್ನು ಮಾಡಿದ್ದೇನು ಗೊತ್ತಾ?

ಪತ್ನಿಯನ್ನು ಕೊಂದ ಪತಿ ಮೃತದೇಹವನ್ನು ಮಾಡಿದ್ದೇನು ಗೊತ್ತಾ?
ಬೆಂಗಳೂರು , ಸೋಮವಾರ, 28 ಜನವರಿ 2019 (07:00 IST)
ಪಾಟ್ನಾ : ಪತ್ನಿಯನ್ನು ಕೊಂದ ಪತಿ ಆಕೆಯ  ದೇಹವನ್ನು ಪೀಸ್ ಪೀಸ್ ಮಾಡಿ ಬೆಡ್ ಕೆಳಗೆ ಬಿಚ್ಚಿಟ್ಟು ಪರಾರಿಯಾದ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.


ಬಬಿತಾ ಕೊಲೆಯಾದ ಮಹಿಳೆ ಎಂಬುದಾಗಿ ತಿಳಿದಬಂದಿದೆ. ಮೃತ ಬಬಿತಾ ತನ್ನ ಪತಿ ರಾಜೇಶ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ರಾಜೇಶ್ ಮನೆ ಮಾಲೀಕನ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ದಂಪತಿಗಳ ನಡುವೆ ಏನು ಸಮಸ್ಯೆ ಇದೆ, ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ತಿಳಿದುಬಂದಿಲ್ಲ.


ಆದರೆ ಬಬಿತಾ ಮನೆಯಿಂದ ಕೆಟ್ಟ ವಾಸನೆ ಬಂದ ಹಿನ್ನಲೆಯಲ್ಲಿ ಮನೆ ಮಾಲೀಕ ಹೋಗಿ ಹುಡುಕಾಡಿದಾಗ ಬಬಿತಾ ದೇಹವನ್ನು ಪೀಸ್ ಪೀಸ್ ಮಾಡಿ ಬೆಡ್ ಕೆಳಗೆ ಬಿಚ್ಚಿಟ್ಟಿದ್ದು ಪತ್ತೆಯಾಗಿದೆ. 2-3 ದಿನಗಳಿಂದ ರಾಜೇಶ್ ಕೂಡ ಕಾಣಿಸುತ್ತಿಲ್ಲ. ಆದರೆ ರಾಜೇಶ್ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಬಬಿತಾ ಪೋಷಕರು ಆರೋಪಿಸುತ್ತಿದ್ದಾರೆ.


ಮನೆ ಮಾಲೀಕನ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದು, ಆರೋಪಿ ರಾಜೇಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರೇ ಎಂ.ಆರ್‌.ಐ. ಸ್ಕ್ಯಾನ್ ರೂಂನಲ್ಲಿ ಬಟ್ಟೆ ಬದಲಾಯಿಸುವ ಮುನ್ನ ಎಚ್ಚರ