Select Your Language

Notifications

webdunia
webdunia
webdunia
webdunia

ದುರ್ಗಾ ಪೂಜೆಯ ವೇಳೆ ಅಪ್ರಾಪ್ತೆಯ ಮೇಲೆ ನಡೆಯಿತು ಇಂತಹ ಕ್ರೂರ ಕೃತ್ಯ

ದುರ್ಗಾ ಪೂಜೆಯ ವೇಳೆ ಅಪ್ರಾಪ್ತೆಯ ಮೇಲೆ ನಡೆಯಿತು ಇಂತಹ ಕ್ರೂರ ಕೃತ್ಯ
ಭೋಪಾಲ್ , ಮಂಗಳವಾರ, 27 ಅಕ್ಟೋಬರ್ 2020 (08:08 IST)
ಭೋಪಾಲ್ :  ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಾಡೋ ಗ್ರಾಮದ ದುರ್ಗಾ ಪೂಜಾ ಕಾರ್ಯಕ್ರಮದಲ್ಲಿ ಭೂತೋಚ್ಚಾಟನೆಯ ನೆಪದಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಕ್ರೂರವಾಗಿ ಹಿಂಸೆ ನೀಡಿದ ಘಟನೆ ನಡೆದಿದ್ದು. ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿ ಬಾಲಕಿಯ ಕೂದಲನ್ನು ಬಲವಂತವಾಗಿ ಎಳೆದಾಡಿದಾಗ ಆಕೆ ನೋವಿನಿಂದ ಕಿರುಚುತ್ತಿದ್ದಾಳೆ. ಹಾಗೇ ಆಕೆಗೆ ಅನೇಕ ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಈ ಘಟನೆಯ ವೇಳೆ ಅಲ್ಲಿ ಹಲವು ಜನರು ಸೇರಿದ್ದರೂ ಒಬ್ಬರು ಆಕೆಗೆ ಸಹಾಯ ಮಾಡಲಿಲ್ಲ ಎನ್ನಲಾಗಿದೆ.

ಈ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ರಾಷ್ಟ್ರೀಯ ಮಹಿಳಾ ಆಯೋಗ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗಕ್ಕೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ತಿಳಿಸಿದೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾದವ ಭೇಟಿಯಾಗುವ ನೆಪದಲ್ಲಿ ಹುಡುಗಿಯ ಶೀಲ ಕೆಡಿಸಿದ