Select Your Language

Notifications

webdunia
webdunia
webdunia
webdunia

ನನ್ನನ್ನು ಜೈಲಿಗೆ ಕಳಿಸುವ ತಿರುಕನ ಕನಸು ನನಸಾಗದು: ಕುಮಾರಸ್ವಾಮಿ

ನನ್ನನ್ನು ಜೈಲಿಗೆ ಕಳಿಸುವ ತಿರುಕನ ಕನಸು ನನಸಾಗದು: ಕುಮಾರಸ್ವಾಮಿ

Sampriya

ನವದೆಹಲಿ , ಮಂಗಳವಾರ, 1 ಅಕ್ಟೋಬರ್ 2024 (17:32 IST)
Photo Courtesy X
ನವದೆಹಲಿ: ಈ ಹಿಂದೆಯೂ ಸಿದ್ದರಾಮಯ್ಯ ಅವರ ಪಟಾಲಂ ನನ್ನನ್ನು ಜೈಲಿಗೆ ಕಳುಹಿಸಲು ಸಂಚು ಹೂಡಿತ್ತು. ಈಗಿರುವ ಅವರು ಪಟಾಲಂ ಕೂಡಾ ಅದೇ ರೀತಿಯಲ್ಲಿ ಸಂಚು ಮಾಡುತ್ತಿದೆ ಎಂದು ಎಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದರು.

ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಅಧಿಕಾರಿಯೊಬ್ಬರ ಕರ್ಮಕಾಂಡದ ಬಗ್ಗೆ ಮಾತನಾಡಿದ್ದಕ್ಕೆ ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್‌ನಲ್ಲಿ ಕುಳಿತು ಮಾತಾಡಿದ್ದಾರೆ ಎಂಬ ಪಕ್ಕಾ ಮಾಹಿತಿ ನನಗಿದೆ. ನಾನು ಜಾಮೀನು ತೆಗೆದುಕೊಂಡಿದ್ದೇನೆ. ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆಂಬ ನನ್ನ ವಕೀಲರ ಅಭಿಪ್ರಾಯದಂತೆ ಜಾಮೀನು ಪಡೆದಿದ್ದೇನೆ. ಇದಕ್ಕೆ ಕಾನೂನಿನಲ್ಲೂ ಅವಕಾಶವಿದೆ ಎಂದರು.

ನಾನು ಪೊಲೀಸ್ ಅಧಿಕಾರಿಯ ಉದ್ಧಟತನವನ್ನು ಖಂಡಿಸಿ, ಆ ಅಧಿಕಾರಿಯ ಹಿನ್ನೆಲೆ ಏನಿದೆ ಎನ್ನುವುದನ್ನು ಹೇಳಿದ್ದೇನೆ. ಅವರಿಗೆ  ಬೆಂಗಳೂರಿನ ಭೂ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜತೆ ಅವರ ನೇರ ನಂಟಿದೆ. ಸಮಾಜ ವಿದ್ರೋಹಿ ಶಕ್ತಿಗಳಿಗೆ ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ? ಕ್ರಿಮಿನಲ್ ಪ್ರಕರಣದಲ್ಲಿ ಅಧಿಕಾರಿಯೇ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಜಾಮೀನು ಮೇಲೆ ಹೊರಗಡೆ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಕಾರಣಕ್ಕೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಸಿದ್ದರಾಮಯ್ಯ