Publish Date: Tue, 30 Oct 2018 (09:14 IST)
Updated Date: Tue, 30 Oct 2018 (09:16 IST)
ಮುಂಬೈ: ಎಟಿಎಂನಿಂದ ಹಣ ದೋಚುವುದು, ಮಿಷನ್ ನನ್ನೇ ಹೊತ್ತೊಯ್ಯುವುದು ಇತ್ತೀಚೆಗೆ ಮಾಮೂಲು. ಈ ಖದೀಮರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಎಟಿಎಂನಿಂದ ಹಣ ದೋಚಲು ಕಳ್ಳರು ಪಕ್ಕಾ ಸಿನಿಮಾ ಶೈಲಿ ಅನುಕರಿಸಿದ್ದಾರೆ. ಎಟಿಎಂ ಕೇಂದ್ರದ ಸಿಸಿಟಿವಿಗೆ ಕಪ್ಪು ಬಣ್ಣ ಸ್ಪ್ರೇ ಮಾಡಿ ಕ್ಯಾಮರಾ ಕ್ಲಿಯರ್ ಆಗಿ ಕಾಣದಂತೆ ಮಾಡಿ ದರೋಡೆ ಮಾಡಿದ್ದಾರೆ. ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ನಲ್ಲಿದ್ದ ಸುಮಾರು 9 ಲಕ್ಷ ರೂ. ನಗದು ದೋಚಿದ್ದಾರೆ.
ಇದು ನಡೆದಿರುವುದು ಮುಂಬೈನ ಭಿವಾಂಡಿ ಬಳಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.