Publish Date: Wed, 24 Oct 2018 (18:05 IST)
Updated Date: Wed, 24 Oct 2018 (18:08 IST)
ಎಂ.ಎಸ್.ಐ.ಎಲ್. ಮದ್ಯದಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಮಂಡ್ಯದ ಮಾದರಹಳ್ಳಿ ಗ್ರಾಮದಲ್ಲಿರುವ ಮದ್ಯದಂಗಡಿಯಲ್ಲಿ ಕನ್ನ ಹಾಕಿರುವ ಕಳ್ಳರು ಮದ್ಯವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಸಿಸಿ ಕ್ಯಾಮರಾಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಕಳ್ಳತನ ಮಾಡಿ ಚಾಲಾಕಿತನ ಮೆರೆಯಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾದರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಖಾರದ ಪುಡಿ ಜತೆ ಆಗಮಿಸಿದ್ದ ಕಳ್ಳರು, ಸಿಸಿ ಕ್ಯಾಮೆರಾಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಕಳ್ಳತನ ಮಾಡಿದ್ದಾರೆ.
ಮದ್ಯದಂಗಡಿ ಬಳಿ ಚೆಲ್ಲಾಪಿಲ್ಲಿ ಆಗಿರುವ ಖಾರದಪುಡಿ ಕವರ್ ಗಳು ಪತ್ತೆಯಾಗಿವೆ. ಈ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.