Webdunia - Bharat's app for daily news and videos

Install App

ಕರೆಂಟ್ ಇಲ್ಲದೆ ಬಟ್ಟೆಗೆ ಇಸ್ತ್ರಿ ಹಾಕಿಲ್ಲವೆಂದು ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕೆ ಗೊತ್ತಾ?

Webdunia
ಗುರುವಾರ, 30 ಆಗಸ್ಟ್ 2018 (08:23 IST)
ಕೊಯಮತ್ತೂರು : ಕರೆಂಟ್ ಇಲ್ಲ, ಬಟ್ಟೆಗೆ ಇಸ್ತ್ರಿ ಹಾಕಿಲ್ಲವೆಂದು ಒದ್ದಾಡುವ ಪರಿಸ್ಥಿತಿ ಇನ್ನುಮುಂದೆ ಇರಲ್ಲ ಬಿಡಿ, ಯಾಕೆಂದರೆ ಇಂಡಿಯನ್‌ ‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಹೊಸ ರೀತಿಯಾದ ಇಸ್ತ್ರಿಪೆಟ್ಟಿಗೆಯೊಂದನ್ನು ಅಭಿವೃದ್ಧಿಪಡಿಸಿದೆ.


ಹೌದು. ಎಲ್‌ಪಿಜಿ ಸಿಲಿಂಡರ್‌ ಸಂಪರ್ಕದಿಂದ ಬಳಸಲು ಸಾಧ್ಯವಾಗುವಂತಹ ಇಸ್ತ್ರಿಪೆಟ್ಟಿಗೆಯನ್ನು ಇಂಡಿಯನ್‌ ‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಅಭಿವೃದ್ಧಿಪಡಿಸಿದೆ. ಇದ್ದಿಲು ಬಳಸಿ ಇಸ್ತ್ರಿ ಮಾಡುವವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಇಸ್ತ್ರಿಪೆಟ್ಟಿಗೆಯನ್ನು ಅಭಿವೃದ್ಧಿಪಡಿಸಲಾಗಿದೆ.


ವೆಚ್ಚದ ದೃಷ್ಟಿಯಿಂದಲೂ ಎಲ್‌ಪಿಜಿ ಆಧಾರಿತ ಇಸ್ತ್ರಿಪೆಟ್ಟಿಗೆ ಅನುಕೂಲಕರ ಎಂದು ಐಒಸಿಯ ತಮಿಳುನಾಡು ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌.ಸೀತಾರಾಮನ್‌ ಹೇಳಿದ್ದಾರೆ. ಹಾಗೇ '5 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ ನೆರವಿನೊಂದಿಗೆ ಬಳಸಬಹುದಾದ ಇಸ್ತ್ರಿಪೆಟ್ಟಿಗೆ ದರ 7 ಸಾವಿರ ರೂ. ಈ ಇಸ್ತ್ರಿಪೆಟ್ಟಿಗೆ ಪರಿಸರ ಸ್ನೇಹಿ. ಆರ್ಥಿಕವಾಗಿಯೂ ಹೊರೆಯಾಗದು' ಎಂದೂ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments