Select Your Language

Notifications

webdunia
webdunia
webdunia
webdunia

ಕಳ್ಳತನಕ್ಕೆ ಬಂದ ಮನೆಯಲ್ಲಿ ಅಡುಗೆ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಕಳ್ಳ!

ಕಳ್ಳತನಕ್ಕೆ ಬಂದ ಮನೆಯಲ್ಲಿ ಅಡುಗೆ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಕಳ್ಳ!
ಗುವಾಹಟಿ , ಗುರುವಾರ, 13 ಜನವರಿ 2022 (10:00 IST)
ಗುವಾಹಟಿ: ಹಸಿವು ಎಂತಹವರನ್ನೇ ಆದರೂ ಯಾವ ಪರಿಸ್ಥಿತಿಗೂ ತಲುಪಿಸುತ್ತದೆ. ಅದೇ ರೀತಿ ಕಳ್ಳತನಕ್ಕೆ ಹೋಗಿದ್ದ ಖದೀಮನೊಬ್ಬ ಹಸಿವಾಯಿತೆಂದು ಅದೇ ಮನೆಯಲ್ಲಿ ಅಡುಗೆ ಮಾಡಲು ಹೋಗಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಗುವಾಹಟಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

ಯಾರೂ ಇಲ್ಲದ ಮನೆಗೆ ಕಳ್ಳತನ ಮಾಡಲು ಹೋದ ಕಳ್ಳನಿಗೆ ಹಸಿವಾಗಿದೆ. ಇದೇ ಕಾರಣಕ್ಕೆ ಆತನ ಅಡುಗೆ ಮನೆಗೆ ನುಗ್ಗಿ ಕಿಚಡಿ ಮಾಡಲು ಶುರು ಮಾಡಿದ್ದಾನೆ. ಆದರೆ ಮನೆಯಲ್ಲಿ ಪಾತ್ರೆಗಳ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ. ಇದರ ಬಗ್ಗೆ ಪೊಲೀಸರು ತಮಾಷೆಯಾಗಿ ಟ್ವೀಟ್ ಮಾಡಿದ್ದು, ನೆಟ್ಟಿಗರು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಲಾಕ್ ಮಾಡಿದ್ದಕ್ಕೆ ಅತ್ಯಾಚಾರದ ಫೋಟೋಗಳನ್ನು ಹರಿಯಬಿಟ್ಟ ಆರೋಪಿ