ಪತಿಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪತ್ನಿ!?

Webdunia
ಬುಧವಾರ, 28 ಸೆಪ್ಟಂಬರ್ 2022 (10:42 IST)
ಚಂಡೀಗಢ : ನೀನು ನೋಡಲು ಕಪ್ಪಾಗಿದ್ಯಾ, ನಿನ್ನ ಮೈ ಬಣ್ಣ ಕಪ್ಪು ಎಂದು ಪ್ರತಿನಿತ್ಯ ಹೀಯಾಳಿಸುತ್ತಿದ್ದ ಪತಿಯನ್ನು ಪತ್ನಿ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಅನಂತ್ ಸೋನ್ವಾನಿ ಮೃತ ವ್ಯಕ್ತಿಯಾಗಿದ್ದಾರೆ ಮತ್ತು ಆರೋಪಿ ಪತ್ನಿಯನ್ನು ಸಂಗೀತಾ ಸೋನ್ವಾನಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಗೀತಾಳನ್ನು ಬಂಧಿಸಿರುವುದಾಗಿ ಪೊಲೀಸ್ ಉಪವಿಭಾಗಾಧಿಕಾರಿ (ಪಟಾನ್ ಪ್ರದೇಶ) ದೇವಾಂಶ್ ರಾಥೋಡ್ ತಿಳಿಸಿದ್ದಾರೆ. 

ಈ ಸಂಬಂಧ ವಿಚಾರಣೆ ವೇಳೆ ಅನಂತ್ ನನ್ನನ್ನು ಯಾವಾಗಲೂ ಕೊಳಕಿ ಎಂದು ರೇಗಿಸುತ್ತಿದ್ದ ಮತ್ತು ಕಪ್ಪು ಮೈ ಬಣ್ಣ ಹೊಂದಿರುವ ಕಾರಣ ಆಗಾಗ ನಿಂದಿಸುತ್ತಿದ್ದ. ಇದೇ ವಿಚಾರವಾಗಿ ಹಲವಾರು ಬಾರಿ ನಮ್ಮಿಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಭಾನುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಜಗಳ ನಡೆದಿತ್ತು.

 ಈ ವೇಳೆ ಕೋಪದಿಂದ ಮನೆಯಲ್ಲಿದ್ದ ಕೊಡಲಿಯಿಂದ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ನನ್ನ ಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂಡಿಗೋ ವಿಮಾನ ಸಮಸ್ಯೆಯಿಂದ ಸಂಕಷ್ಟಕ್ಕೀಡಾದವರಿಗೆ ಇಲ್ಲಿದೆ ಗುಡ್ ನ್ಯೂಸ್

ಸಿದ್ದರಾಮಯ್ಯನವರಿಗೆ ಠಕ್ಕರ್ ಕೊಡಲು ಡಿಕೆ ಶಿವಕುಮಾರ್ ಗೆ ಸಿಕ್ಕಿದೆ ಭರ್ಜರಿ ಅವಕಾಶ

ಸಿದ್ದರಾಮಯ್ಯನವರ ಈ ಗುಟ್ಟು ಹೈಕಮಾಂಡ್ ಗೂ ಗೊತ್ತಿದೆ

Karnataka Weather: ವಾರಂತ್ಯದಲ್ಲಿ ಮಳೆಯಿಲ್ಲ, ಆದರೆ ಹವಾಮಾನ ಎಚ್ಚರಿಕೆ ಗಮನಿಸಿ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments