Webdunia - Bharat's app for daily news and videos

Install App

ಹನಿಮೂನ್ಗೆ ಬಂದು ಪತಿಯನ್ನು ಬಿಟ್ಟು ಹೋದ ಪತ್ನಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ?

Webdunia
ಶುಕ್ರವಾರ, 11 ಆಗಸ್ಟ್ 2023 (12:23 IST)
ಜೈಪುರ : ಹೊಸದಾಗಿ ಮದುವೆಯಾದ ಜೋಡಿಯೊಂದು ಹನಿಮೂನ್ ಬಂದು, ಪತಿಯನ್ನು ಹೋಟೆಲ್ನಲ್ಲಿಯೇ ಪತ್ನಿ ಬಿಟ್ಟು ಹೋಗಿರುವ ಅಚ್ಚರಿಯ ಪ್ರಕರಣವೊಂದು ರಾಜಸ್ಥಾನದ ಜೈಪುರದಿಂದ ಬೆಳಕಿಗೆ ಬಂದಿದೆ.

ಪತಿಯೊಂದಿಗೆ ಹೋಟೆಲ್ ವಿಚಾರವಾಗಿ ಈಕೆ ಪತಿ ಜೊತೆ ಮುನಿಸಿಕೊಂಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ರಿಂಗಾಸ್ನಲ್ಲಿರುವ ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಲೆಂದು ವಾಹನ ಬುಕ್ ಮಾಡಲು ಪತಿ ಹೋದಾಗ ಆತನನ್ನು ಕೋಪದಿಂದ ಪತ್ನಿ ಬಿಟ್ಟು ಹೋಗಿದ್ದಾಳೆ.

ಮಧ್ಯಪ್ರದೇಶದ ಭೋಪಾಲ್ ಮೂಲದ ದಂಪತಿ ಜುಲೈ 29 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಹನುಮೂನಿಗೆಂದು ಆಗಸ್ಟ್ 5 ರಂದು ಜೈಪುರಕ್ಕೆ ಬಂದಿದ್ದು, ಚೌಮು ಪುಲಿಯಾ ಸಮೀಪದ ಹೋಟೆಲ್ನಲ್ಲಿ ತಂಗಿದ್ದರು. ಮರುದಿನ ಬೆಳಗ್ಗೆ ದಂಪತಿ ಜೈಪುರ ಸುತ್ತಾಡಿ ನಂತರ ಅಮೇರ್ ಫೋರ್ಟ್ಗೆ ಭೇಟಿ ನೀಡಿದರು.
ಸಂಜೆ 3 ಗಂಟೆ ಸುಮಾರಿಗೆ ಹೋಟೆಲ್ಗೆ ಹಿಂದಿರುಗಿದರು. ಇದಾದ ಬಳಿಕ ಅವರು ಬಾಬಾ ಖತುಶ್ಯಾಮ್ ಜಿ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸಿದ್ದರು. ಅಂತೆಯೇ ಪತಿ ವಾಹನ ಬುಕ್ ಮಾಡಲು ತೆರಳಿದರು. ಹೀಗೆ ಹೋದವನು ವಾಪಸ್ ರೂಮಿಗೆ ಬರುವಾಗ ಪತ್ನಿ ತನ್ನ ಲಗೇಜ್ನೊಂದಿಗೆ ಕಾಣೆಯಾಗಿದ್ದಳು. ಇದನ್ನು ಕಂಡ ಪತಿ ದಿಗ್ಭ್ರಮೆಗೊಂಡನು. 

ಆಕೆಗಾಗಿ ಇಡೀ ಹೋಟೆಲ್ನಲ್ಲಿ ಹುಡುಕಾಟ ನಡೆಸಿದನು. ಎಲ್ಲಯೂ ಸಿಗದೇ ಇದ್ದಾಗ ಆಕೆಯ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾನೆ. ಆದರೆ ಆಕೆ ಕರೆ ಸ್ವೀಕರಿಸುತ್ತಿರಲಿಲ್ಲ. ಬಳಿಕ ಅವರು ಹೋಟೆಲ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಆಕೆ ಫೋನ್ನಲ್ಲಿ ಮಾತನಾಡುತ್ತಾ ಹೋಟೆಲ್ನಿಂದ ಹೊರಟು ಹೋಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪತಿ ಝೋತ್ವಾರಾ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಹೋದರರಿಬ್ಬರಿಂದ ನಿರಂತರ ಅತ್ಯಾಚಾರ: 5 ತಿಂಗಳ ಗರ್ಭಿಣಿ ಸಂತ್ರಸ್ತೆಯನ್ನು ಜೀವಂತ ಹೂಳಲು ಯತ್ನ

ಕೊಚ್ಚಿಯ ಸೌಮ್ಯಾ ರೇಪ್ ಆ್ಯಂಡ್ ಮರ್ಡರ್ ಆರೋಪಿ ಜೈಲಿನಿಂದ ತಪ್ಪಿಸಿ, ಬಾವಿಯಲ್ಲಿ ಅವಿತಿದ್ದ ಕಾಮುಕ

ರಾಜಸ್ಥಾನ ಸರ್ಕಾರ ಶಾಲೆ ಕಟ್ಟಡ ಕುಸಿದು 7 ಮಕ್ಕಳು ದುರ್ಮರಣ, ಇಬ್ಬರಿಗೆ ಗಂಭೀರ

ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ಬಿಗ್ ರಿಲೀಫ್‌

ಯೂರಿಯಾ ಗೊಬ್ಬರ ಕೊಡಿ ಎಂದು ಕೇಂದ್ರ ಸಚಿವರಿಗೆ ಪತ್ರ ಬರೆದ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments