Webdunia - Bharat's app for daily news and videos

Install App

ನಮ್ಮನ್ನು ವಿಶ್ವವೇ ಗೌರವಿಸುತ್ತಿದೆ- ಪ್ರಧಾನಮಂತ್ರಿ ನರೇಂದ್ರ ಮೋದಿ

Webdunia
ಸೋಮವಾರ, 30 ಅಕ್ಟೋಬರ್ 2023 (10:58 IST)
ವಿಶ್ವವೇ ಭಾರತದತ್ತ ಗೌರವಪೂರ್ಣವಾಗಿ ನೋಡುತ್ತಿದೆ. ಇದು ನನ್ನಿಂದಾಗಿ ಸಾಧ್ಯವಾಗಿಲ್ಲ. ದೇಶದ 125 ಕೋಟಿ ಜನತೆ ಕೇಂದ್ರದಲ್ಲಿ ಸಶಕ್ತ ಮತ್ತು ಸ್ಥಿರ ಸರಕಾರವನ್ನು ಆಯ್ಕೆ ಮಾಡಿದ್ದರಿಂದ ಇಂದು ನಮ್ಮನ್ನು ವಿಶ್ವವೇ ಗೌರವಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.   
 
ಮೋದಿಯಿಂದ ದೇಶದ ಪ್ರತಿಷ್ಠೆ ಹೆಚ್ಚಾಗುತ್ತಿಲ್ಲ. 125 ಕೋಟಿ ಜನತೆ ಸ್ಥಿರ ಸರಕಾರ ಆಯ್ಕೆ ಮಾಡಿದ್ದರಿಂದ ಭಾರತದ ಪ್ರತಿಷ್ಠೆ  ಹೆಚ್ಚಾಗುತ್ತಿದೆ. ಇದು ಜನತೆಯ ಮ್ಯಾಜಿಕ್ ಹೊರತು ಮೋದಿಯ ಮ್ಯಾಜಿಕ್ ಅಲ್ಲ. ವಿಶ್ವದಲ್ಲಿ ಖ್ಯಾತಿ ಪಡೆಯಬೇಕು ಎಂದು ಬಯಸಿದಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
 
 
ರಾಜ್ಯದ ಜನತೆ ಬದಲಾವಣೆ ಬಯಸಿದ್ರೆ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಹರಿಯಾಣಾ   ಪ್ರಚಾರ ಅಂಗವಾಗಿ ಅಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 
 
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆತಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದ್ದಾರೆ.
 
ಮೊದಲನೆಯದು ಕಾಂಗ್ರೆಸ್ ಮುಕ್ತವಾಗಬೇಕು. ಎರಡನೆಯದು  ಬಹುಮತದೊಂದಿಗೆ ಸ್ಥಿರ ಸರಕಾರ ರಚನೆಯಾಗಬೇಕು. ಮೂರನೆಯದು ಬಿಜೆಪಿ ಪಕ್ಷ  ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟು

ನನ್ನನ್ನು ಕೆಳಗಿಳಿಸಲು ದೆಹಲಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ: ಕೆಎನ್‌ ರಾಜಣ್ಣ ‌ಕಿಡಿ

ಸ್ವಾತಂತ್ರ್ಯ ದಿನಾಚರಣೆಯಂದೆ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಿದ ಆಂಧ್ರ ಸಿಎಂ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments