ಹಾರೋಹಳ್ಳಿ: ಬೆಳೆ ಹಾನಿ ಮಾಡುತ್ತವೆ ಎಂದು ಮಂಗಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿ ಗೋಣಿ ಚೀಲದಲ್ಲಿ ತುಂಬಿ ರಸ್ತೆ ಬದಿ ಎಸೆದ ಅಮಾನವೀಯ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ.
ಕೋತಿಗಳು ತೆಂಗಿನ ತೋಟಕ್ಕೆ ನುಗ್ಗಿ ಕಾಯಿ ಕಿತ್ತು ಹಾನಿ ಮಾಡುತ್ತಿದ್ದವು. ಇದರಿಂದ ಆಕ್ರೋಶಗೊಂಡ ಕಿಡಿಗೇಡಿಗಳು ಸುಮಾರು ಏಳು ಕೋತಿಗಳನ್ನು ಕೊಂದು ಚೀಲದಲ್ಲಿ ತುಂಬಿ ಎಸೆದಿದ್ದಾರೆ.
ಮಂಗಗಳು ವನ್ಯಜೀವಿ ಸಂರಕ್ಷಿತ ಪ್ರಾಣಿಗಳ ಕಾಯ್ಡೆಯಡಿಗೊಳಗಾಗಿದ್ದರೂ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅರಣ್ಯಾಧಿಕಾರಿಗಳು ಉಪೇಕ್ಷೆ ಮಾಡಿದ್ದಾರೆ. ಇತ್ತ ಸ್ಥಳೀಯರೇ ಕೋತಿಗಳನ್ನು ಪೂಜೆ ಸಲ್ಲಿಸಿ ಮಣ್ಣು ಮಾಡಿದ್ದಾರೆ.