Select Your Language

Notifications

webdunia
webdunia
webdunia
webdunia

ಇಂದು ಪ್ರಧಾನಿ ಮೋದಿಯಿಂದ ಸರ್ದಾರ್ ಧಾಮ್ ಭವನ ಉದ್ಘಾಟನೆ

ಇಂದು ಪ್ರಧಾನಿ ಮೋದಿಯಿಂದ ಸರ್ದಾರ್ ಧಾಮ್ ಭವನ ಉದ್ಘಾಟನೆ
ನವದೆಹಲಿ , ಶನಿವಾರ, 11 ಸೆಪ್ಟಂಬರ್ 2021 (09:55 IST)
ನವದೆಹಲಿ : ಅಹ್ಮದಾಬಾದ್ ನ ಸರ್ದಾರ್ ಧಾಮ್ ಭವನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉದ್ಘಾಟಿಸಲಿದ್ದಾರೆ. ಅವರು ಇಂದು ಬೆಳಿಗ್ಗೆ 11 ಗಂಟೆಗೆ ಸರ್ದಾರ್ ಧಾಮ್ ಎರಡನೇ ಹಂತದ ಕನ್ಯಾ ಛತ್ರಾಲಯದ (ಬಾಲಕಿಯರ ಹಾಸ್ಟೆಲ್) 'ಭೂಮಿ ಪೂಜೆ' ನೆರವೇರಿಸಲಿದ್ದಾರೆ.

ಸರ್ದಾರ್ ಧಾಮ್ ಶೈಕ್ಷಣಿಕ ಮತ್ತು ಸಾಮಾಜಿಕ ಪರಿವರ್ತನೆ, ಸಮಾಜದ ದುರ್ಬಲ ವರ್ಗಗಳ ಉನ್ನತಿ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ಯವರ ಕಚೇರಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಹಮದಾಬಾದ್ನಲ್ಲಿ ಸ್ಥಾಪಿಸಲಾಗಿರುವ ಸರ್ದಾರ್ಧಂ ಭವನವು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. 2 ಸಾವಿರ ವಿದ್ಯಾರ್ಥಿನಿಯರು ಉಳಿದುಕೊಳ್ಳಲು ಅನುಕೂಲವಾಗುವ ಕನ್ಯಾ ಛತ್ರಾಲಯವನ್ನು ನಿರ್ಮಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಭಾಗವಹಿಸಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಬೂಲ್ ಏರ್ಪೋರ್ಟ್ ಹೆಸರು ಬದಲಾವಣೆ ಮಾಡಿದ ತಾಲಿಬಾನ್!