Select Your Language

Notifications

webdunia
webdunia
webdunia
webdunia

ಕಾಬೂಲ್ ಏರ್ಪೋರ್ಟ್ ಹೆಸರು ಬದಲಾವಣೆ ಮಾಡಿದ ತಾಲಿಬಾನ್!

ಕಾಬೂಲ್ ಏರ್ಪೋರ್ಟ್ ಹೆಸರು ಬದಲಾವಣೆ ಮಾಡಿದ ತಾಲಿಬಾನ್!
ಕಾಬೂಲ್ , ಶನಿವಾರ, 11 ಸೆಪ್ಟಂಬರ್ 2021 (09:49 IST)
ಕಾಬೂಲ್ :  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಬೆನ್ನಲ್ಲೇ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹೆಸರನ್ನು ಬದಲಾವಣೆ ಮಾಡಲಾಗಿದೆ.

ಕಾಬೂಲ್ ವಿಮಾನ ನಿಲ್ದಾಣಕ್ಕೆ ಇದ್ದ ಹಮೀದ್ ಕರ್ಜಾಯ್ ಹೆಸರನ್ನು ಬದಲಿಸಿದ ತಾಲಿಬಾನ್ ಸರ್ಕಾರ ಅದನ್ನು ಕಾಬೂಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ಬದಲಾವಣೆ ಮಾಡಿಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಹವಣಿಸುತ್ತಿರುವ ತಾಲಿಬಾನ್ ಸೆ.11ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ಘೋಷಿಸಿತ್ತು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ದಿನದಂದು ಅಫ್ಘಾನಿಸ್ತಾನದಲ್ಲಿ ತನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವುದು ತಾಲಿಬಾನ್ ಉದ್ದೇಶವಾಗಿತ್ತು. ಆದರೆ ಅಧಿಕಾರ ಸ್ವೀಕಾರ ಸಮಾರಂಭವನ್ನು ಮುಂದೂಡಲಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಈ ರಾಜ್ಯದ ಸರ್ಕಾರಿ ನೌಕರರು ಜೀನ್ಸ್-ಟೀ ಶರ್ಟ್ ಗಳನ್ನು ಧರಿಸುವಂತಿಲ್ಲ!