Select Your Language

Notifications

webdunia
webdunia
webdunia
webdunia

ಕಾಬೂಲ್ ನಲ್ಲಿ ರಾಕೆಟ್ ದಾಳಿ

ಕಾಬೂಲ್ ನಲ್ಲಿ ರಾಕೆಟ್ ದಾಳಿ
ಕಾಬೂಲ್ , ಸೋಮವಾರ, 30 ಆಗಸ್ಟ್ 2021 (11:13 IST)
ಕಾಬೂಲ್ : ಕಾಬೂಲ್ ನ ಜನವಸತಿ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆದಿದ್ದು ದಾಳಿಯಲ್ಲಿ ಮಗು ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಪೊಲೀಸರು ತಿಳಿಸಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಮೆರಿಕಾ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಜೆಗಳನ್ನು ಸ್ಥಳಾಂತರಿಸಿದ್ದವು. ಇನ್ನು ಅಮೆರಿಕಾದಿಂದ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿರುವಾಗಲೇ ಕಾಬೂಲ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುವ್ಯ ದಿಕ್ಕಿನಲ್ಲಿ ರಾಕೆಟ್ ದಾಳಿ ನಡೆದಿದ್ದು ಮಗುವೊಂದು ಸಾವನ್ನಪ್ಪಿದೆ ಎಂದು ಅಫ್ಘಾನ್ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ
ಇನ್ನು ಇತ್ತೀಚೆಗಷ್ಟೇ ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿತ್ತು. ಪರಿಣಾಮ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ರಾಕೆಟ್ ದಾಳಿ ನಡೆದಿದೆ.
ಕಾಬೂಲ್ ನಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆಯುವ ಅಪಾಯವಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಕೆಟ್ ದಾಳಿ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೇಡಿಯೋ, ಟಿವಿಗಳಲ್ಲಿ ಮಹಿಳೆಯರ ಧ್ವನಿ ಕೇಳುವಂತಿಲ್ಲ: ತಾಲಿಬಾನಿಗಳ ಆದೇಶ