Select Your Language

Notifications

webdunia
webdunia
webdunia
Thursday, 10 April 2025
webdunia

ವಿಶೇಷ ಅಧಿವೇಶನಕ್ಕೆ ಒಪ್ಪಿಗೆ ನೀಡಿದ ಪಂಜಾಬ್ ಗವರ್ನರ್

ವಿಶೇಷ ಅಧಿವೇಶನ
ಚಂಡೀಗಢ , ಸೋಮವಾರ, 26 ಸೆಪ್ಟಂಬರ್ 2022 (13:26 IST)
ಚಂಡೀಗಢ  : ಸೆಪ್ಟೆಂಬರ್ 22 ರಂದು ವಿಶ್ವಾಸಮತ ಚಲಾಯಿಸಲು ಪಂಜಾಬ್ನ ಆಮ್ ಆದ್ಮಿ ಪಕ್ಷ ಕರೆದಿದ್ದ ಒಂದು ದಿನದ ವಿಶೇಷ ಅಧಿವೇಶವನ್ನು  ಪಂಜಾಬ್ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್  ಅವರು ರದ್ದುಗೊಳಿಸಿದ್ದರು.

ಇದೀಗ ಸೆಪ್ಟೆಂಬರ್ 27ರಂದು 1 ದಿನದ ವಿಧಾನಸಭೆ ಅಧಿವೇಶನ ನಡೆಸುವ ಸರ್ಕಾರದ ಮನವಿಯನ್ನು ಅವರು ಅಂಗೀಕರಿಸಿದ್ದಾರೆ.

ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರ ಸರಕು ಸೇವಾ ತೆರಿಗೆ, ವಿದ್ಯುತ್ ಪೂರೈಕೆಯಂತಹ ವಿಷಯಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ಅಧಿವೇಶನ ನಡೆಸಲಿದೆ. ಇದಕ್ಕೆ ರಾಜ್ಯಪಾಲರು ಅನುಮತಿ ನೀಡಿರುವುದಾಗಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಭಾನುವಾರ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಹ್ಲೋಟ್ ಬಣದ ಶಾಸಕರಿಂದ ರಾಜೀನಾಮೆ ಎಚ್ಚರಿಕೆ?