ಚಂಡೀಗಢ : ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಪ್ರಸಿದ್ಧ ಆರೋಗ್ಯ ತಜ್ಞರೂ ಆಗಿರುವ ಡಾ.ರಾಜ್ ಬಹದ್ದೂರ್ ಅವರನ್ನು ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ಗಲೀಜಾದ ಹಾಸಿಗೆ ಮೇಲೆ ಮಲಗುವಂತೆ ಸೂಚಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆ ಸಾರ್ವಜನಿಕವಾಗಿ ನನಗೆ ಅವಮಾನವಾಗಿದೆ ಎಂದು ರಾಜ್ ಬಹದ್ದೂರ್ ರಾಜೀನಾಮೆ ನೀಡಿದ್ದಾರೆ.
ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ವಾರ್ಡ್ಗಳಲ್ಲಿ ಶುಚಿತ್ವದ ಬಗ್ಗೆ ದೂರುಗಳು ಬಂದ ನಂತರ, ಚೇತನ್ ಸಿಂಗ್ ಜೌರಮಜ್ರಾ ಅವರು ಮಾಧ್ಯಮಗಳು ಮತ್ತು ಕ್ಯಾಮೆರಾಮೆನ್ಗಳೊಂದಿಗೆ ಸರ್ಕಾರಿ ಆಸ್ಪತ್ರೆಗೆ ಪ್ರವೇಶಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರು ರಾಜ್ ಬಹದ್ದೂರ್ ಅವರಿಗೆ ರೋಗಿಯೊಬ್ಬರ ಗಲೀಜಾದ ಹಾಸಿಗೆಯ ಮೇಲೆ ಮಲಗಲು ಹೇಳಿದ್ದಾರೆ.
ರಾಜ್ ಬಹದ್ದೂರ್ ಅವರು ಸ್ವಲ್ಪ ಸಮಯ ಹಾಸಿಗೆ ಮೇಲೆ ಮಲಗಿಕೊಂಡಿದ್ದಾರೆ. ಈ ವೇಳೆ ಹಲವು ಜನರು ಸ್ಥಳದಲ್ಲಿ ಇದ್ದರು. ಅಲ್ಲದೇ ವೀಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.