ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಬಹುಮತವನ್ನು ಸಾಬೀತುಪಡಿಸಲು ವಿಶೇಷ ಅಧಿವೇಶನವನ್ನು ಕರೆದಿದ್ದರು.
ಆದರೆ ಪಂಜಾಬ್ನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಇದಕ್ಕೆ ಅನುಮತಿಯನ್ನು ನಿರಾಕರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ತನ್ನ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಈ ಹಿಂದೆ ಆರೋಪಿಸಿತ್ತು.
ಈ ಹಿನ್ನೆಲೆ ಸೋಮವಾರ ಭಗವಂತ್ ಮಾನ್ ಅವರು ಗುರುವಾರ ವಿಶ್ವಾಸಮತ ಯಾಚನೆ ಮಾಡುವುದಾಗಿ ಹೇಳಿದ್ದರು. ಆದರೆ ವಿಶ್ವಾಸಮತ ಸಾಬೀತುಪಡಿಸಲು ಕರೆದಿರುವ ಅಧಿವೇಶನ ನಿಯಮಾನುಸಾರವಾಗಿಲ್ಲ ಎಂದು ರಾಜಭವನ ವಿಶೇಷ ಅಧಿವೇಶನದ ಆದೇಶವನ್ನು ರದ್ದುಗೊಳಿಸಿದೆ.