ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಸರಣಿ ಅತ್ಯಾಚಾರಿಯೊಬ್ಬ ತನ್ನ ಗಂಟಲನ್ನು ತಾನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಈ ರೀತಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸೈಕೊ ಶಂಕರ್ ಎಂದು ಪ್ರಸಿದ್ದಿಯಾಗಿದ್ದು, ಇತ 15 ಕ್ಕೂ ಹೆಚ್ಚು ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಎಂಬುದಾಗಿ ತಿಳಿದುಬಂದಿದೆ.
ಈ ಹಿಂದೆ ಇದೇರೀತಿಯಲ್ಲಿ ಮಾನಸಿಕ ವ್ಯಕ್ತಿಯೊಬ್ಬನಿಂದ ಇಡೀ ಭಾರತವನ್ನೇ ಬೆಚ್ಚಿಬೀಳಿಸುವಂತಹ ಅತ್ಯಾಚಾರ ಘಟನೆಯೊಂದು ಸಂಭವಿಸಿತ್ತು. ಜುಲೈ 2015ರಲ್ಲಿ ಪೊಲೀಸರು ಸೆರೆಹಿಡಿದ ಮಾನಸಿಕ ವ್ಯಕ್ತಿಯಬ್ಬ ಸುಮಾರು 40 ಹುಡುಗಿಯರನ್ನು ಲೈಂಗಿಕ ಕಿರುಕುಳ ನೀಡಿ, ನಂತರ ಅವರನ್ನು ಕೊಲೆ ಮಾಡಿದ್ದಾನೆ. ಅದರಲ್ಲಿ ಇಬ್ಬರು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರು. ಅಲ್ಲದೇ ಆತ ಕೊಲೆ ಮಾಡಿದ 40 ಮತೃದೇಹಗಳಲ್ಲಿ 32 ಜನ ಹುಡುಗಿಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, ಎಲ್ಲಾ ಬಲಿಪಶುಗಳು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ವಿಚಾರಣೆ ಮಾಡಿದಾಗ ಆತ 10 ವರ್ಷ ವಯಸ್ಸಿನಲ್ಲಿರುವಾಗ ಯಾರೋ ಇಬ್ಬರು ಪುರುಷರು ಸಿಹಿತಿಂಡಿ ಆಸೆ ತೋರಿಸಿ ಕೋಣೆಗೆ ಕರೆದುಕೊಂಡು ಹೋಗಿ ಆತನ ಬಟ್ಟೆಗಳನ್ನು ತೆಗೆದು ಲೈಂಗಿಕ ಕಿರುಕುಳ ನೀಡಿದ್ದಾರಂತೆ, ಇದರಿಂದ ಹತಾಶೆಯನಾದ ಆತ ಇಂತಹ ದುಷ್ಕೃತ್ಯಗಳನ್ನು ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ