Select Your Language

Notifications

webdunia
webdunia
webdunia
webdunia

ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ !

ಮಗಳಿಗೆ ವಿಚ್ಛೇದನ ಕೊಡಲು ಪ್ರೋತ್ಸಾಹಿಸಿದ ಅತ್ತೆಯನ್ನೇ ಹತ್ಯೆಗೈದ !
ಅಮರಾವತಿ , ಭಾನುವಾರ, 25 ಜೂನ್ 2023 (10:31 IST)
ಅಮರಾವತಿ : ಮಗಳನ್ನು ವಿಚ್ಛೇದನ ಕೊಡುವಂತೆ ಪ್ರೋತ್ಸಾಹಿಸಿದ ಕಾರಣಕ್ಕಾಗಿ ಅತ್ತೆಯನ್ನೇ ಅಳಿಯ ಹತ್ಯೆ ಮಾಡಿದ ಘಟನೆ ಆಂಧ್ರಪ್ರದೇಶದ ವಿಜಯವಾಡದ ಫ್ಲೈಓವರ್ ಮೇಲೆ ಶನಿವಾರ ನಡೆದಿದೆ.
 
ನಾಗಮಣಿ (47) ಕೊಲೆಯಾದ ಮಹಿಳೆ. ಆರೋಪಿ ರಾಜೇಶ್ (37) ಸುಮಾರು 9 ಗಂಟೆಯ ವೇಳೆಗೆ ಆತನ ಅತ್ತೆಯನ್ನು ಚನುಮೋಲು ವೆಂಕಟರಾವ್ ಫ್ಲೈಓವರ್ ಮೇಲೆ ಕೊಂದಿದ್ದಾನೆ. ಆರೋಪಿ ರಾಜೇಶ್ಗೆ ಆತನ ಹೆಂಡತಿ ವಿಚ್ಛೇದನ ನೀಡಲು ಮುಂದಾಗಿದ್ದಳು.

ಈ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ಬಾಕಿ ಇದ್ದು, ಮಗಳಿಗೆ ವಿಚ್ಛೇದನ ನೀಡುವಂತೆ ಪ್ರೋತ್ಸಾಹಿಸಿದ್ದಕ್ಕಾಗಿ ನಾಗಮಣಿಯನ್ನು ಹತ್ಯೆ ಮಾಡಿದ್ದಾನೆ ಎಂದು ವಿಜಯವಾಡ ಪಶ್ಚಿಮ ಎಸಿಪಿ ಹನುಮಂತ ರಾವ್ ತಿಳಿಸಿದ್ದಾರೆ. 

ಘಟನೆಯಿಂದ ನಾಗಮಣಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರೋಪಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಾಜೇಶ್ ಮನೆಮನೆಗೆ ಬಟ್ಟೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧ : ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಗಂಡ!