Publish Date: Sat, 06 May 2023 (15:00 IST)
Updated Date: Sat, 06 May 2023 (15:03 IST)
ಹೈದರಾಬಾದ್: ಸಮಂತಾ ಋತು ಪ್ರಭು ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿಜ ಕಾರಣವೆನೆಂಬುದನ್ನು ನಾಗಚೈತನ್ಯ ಕೊನೆಗೂ ಬಹಿರಂಗಪಡಿಸಿದ್ದಾರೆ.
ಟಾಲಿವುಡ್ ನ ರಿಯಲ್ ಜೋಡಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದಾಗ ಅಭಿಮಾನಿಗಳಿಗೂ ತೀವ್ರ ಬೇಸರವಾಗಿತ್ತು. ಆದರೆ ವಿಚ್ಛೇದನಕ್ಕೆ ನಿಜ ಕಾರಣವೇನೆಂಬುದನ್ನು ಇದುವರೆಗೆ ಇಬ್ಬರೂ ಎಲ್ಲೂ ಬಹಿರಂಗಪಡಿಸಿರಲಿಲ್ಲ.
ಆದರೆ ಇದೀಗ ಸಂದರ್ಶನವೊಂದರಲ್ಲಿ ನಾಗಚೈತನ್ಯ ತಾವಾಗಿಯೇ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿದ್ದ ಗಾಸಿಪ್ ಗಳೇ ನಮ್ಮ ವಿಚ್ಛೇದನಕ್ಕೆ ಕಾರಣವಾಯಿತು. ಮೊದ ಮೊದಲು ನಾವು ಗಾಸಿಪ್ ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇದು ವಿಪರೀತವಾದಾಗ ನಮ್ಮ ನಡುವೆ ತೀವ್ರ ಜಗಳವಾಗುತ್ತಿತ್ತು. ಹೀಗಾಗಿ ಇಬ್ಬರೂ ನೆಮ್ಮದಿಯಿಂದ ಜೊತೆಗಿರಲು ಸಾಧ‍್ಯವಾಗಲಿಲ್ಲ. ಸಮಂತಾ ಎಲ್ಲೇ ಇದ್ದರೂ ಚೆನ್ನಾಗಿರಲಿ ಎಂದಿದ್ದಾರೆ.