ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಂಭಾವನೆ ಈಗ ದಿಡೀರ್ ಆಗಿ ಏರಿಕೆಯಾಗಿದೆ. ಇದೀಗ ಅವರ ಸ್ಯಾಲರಿ ಎಷ್ಟು ಗೊತ್ತಾ?
ಮಹೇಶ್ ಬಾಬು ಸಾಮಾನ್ಯವಾಗಿ ಒಂದು ಸಿನಿಮಾಗೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಇದಕ್ಕೆ ಮೊದಲು ಮಾಡಿದ್ದ ಸಿನಿಮಾಗಳಿಗೆ ಅವರ ಸಂಭಾವನೆ ಅಷ್ಟಿತ್ತು. ಆದರೆ ಈಗ ದಿಡೀರ್ ಏರಿಕೆ ಮಾಡಿದ್ದಾರೆ.
ಮಹೇಶ್ ಬಾಬು ಈಗ ತ್ರಿವಿಕ್ರಮ್ ನಿರ್ದೇಶನದ ಸಿನಿಮಾಗೆ 60-70 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯಿದೆ. ಈ ಮೂಲಕ ಅವರ ಸಂಭಾವನೆ 10 ಕೋಟಿಯಷ್ಟು ಹೆಚ್ಚಾಗಿದೆ ಎನ್ನಲಾಗಿದೆ.