Publish Date: Thu, 04 May 2023 (16:06 IST)
Updated Date: Thu, 04 May 2023 (16:07 IST)
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸಾಕಷ್ಟು ಸ್ಯಾಂಡಲ್ ವುಡ್ ನಟರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಲವರು ತಮ್ಮ ಪರಿಚಿತ ಅಭ್ಯರ್ಥಿಗಳ ಪರವಾಗಿ ಪಕ್ಷಾತೀತವಾಗಿ ಪ್ರಚಾರ ನಡೆಸಿದರೆ ಮತ್ತೆ ಕೆಲವರು ಒಂದು ಪಕ್ಷದ ಅಧಿಕೃತ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಕಾಂಗ್ರೆಸ್ ಪಕ್ಷ ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್.ವಿ. ದೇವರಾಜ್ ಪರವಾಗಿ ಧ್ರುವ ಸರ್ಜಾರನ್ನು ಪ್ರಚಾರಕರಾಗಿ ಕರೆತರುವಲ್ಲಿ ಯಶಸ್ವಿಯಾಗಿದೆ. ಧ್ರುವ ಸರ್ಜಾ ಇಂದು ಸಂಜೆ ಚಿಕ್ಕಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.