Webdunia - Bharat's app for daily news and videos

Install App

ವಿಡಿಯೋ ಗೇಮ್ ಆಟಕ್ಕೆ ಬಲಿಯಾಯ್ತು ಯುವಕನ ಪ್ರಾಣ

Webdunia
ಬುಧವಾರ, 6 ನವೆಂಬರ್ 2019 (09:02 IST)
ಚೆನ್ನೈ : ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುವ ವಿಚಾರಕ್ಕೆ 18 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನನ್ನು ಗುಂಡಿಕ್ಕಿ ಕೊಂದ ಘಟನೆ ಚೆನ್ನೈನ ವೆಂಕಟಮಂಗಲಂ ಎಂಬಲ್ಲಿ ನಡೆದಿದೆ.




ಮುಕೇಶ್ ಕುಮಾರ್ ಕೊಲೆಯಾದ ಸ್ನೇಹಿತ, ವಿಜಯ್ ಕುಮಾರ್ ಕೊಲೆ ಮಾಡಿದ ಯುವಕ. ವೃತ್ತಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿದ್ದ ವಿಜಯ ಕುಮಾರ್ ಸ್ನೇಹಿತ ಮುಕೇಶ್ ಮನೆಗೆ ಬಂದು ಆತನೊಂದಿಗೆ ವಿಡಿಯೋ ಗೇಮ್ ಆಡುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಮನೆಯೊಳಗೆ ಗುಂಡಿನ ಸಪ್ಪಳ ಕೇಳಿದ್ದು,  ಮನೆಯ ಹೊರಗಿದ್ದ ಮುಕೇಶ್ ಸಹೋದರ ಒಳಗೆ ಬಂದು ನೋಡಿದಾಗ ಮುಕೇಶ್ ಹಣೆಗೆ ಗುಂಡು ತಗುಲಿದ್ದು, ವಿಜಯ್ ಅಲ್ಲಿಂದ ಪರಾರಿಯಾಗಿದ್ದ.


ಆದರೆ ಸಾವು ಬದುಕಿನ ಜೊತೆ ಹೋರಾಡುತ್ತಿದ್ದ ಮುಕೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಸಾವನ್ನಪ್ಪಿದ್ದಾನೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ವಿಜಯ್ ಯಾವ ಕಾರಣಕ್ಕೆ ಮುಕೇಶ್ ನನ್ನು ಕೊಲೆ ಮಾಡಿದ ಎಂಬ ವಿಚಾರ ತಿಳಿದುಬಂದಿಲ್ಲ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments