Select Your Language

Notifications

webdunia
webdunia
webdunia
webdunia

ಆ್ಯರೇಂಜ್ ಮ್ಯಾರೇಜ್‌ ಅನ್ನು ನಿರಾಕರಿಸಿದ ಶಿಕ್ಷಕಿಯನ್ನೇ ಹತ್ಯೆ ಮಾಡಿದ ವರ

Tamil Nadu Government School Teacher, Teacher Ramani No More, TamilNadu Teacher Murder Case

Sampriya

ತಮಿಳುನಾಡು , ಬುಧವಾರ, 20 ನವೆಂಬರ್ 2024 (19:45 IST)
ತಮಿಳುನಾಡು: ಮದುವೆಗೆ ನಿರಾಕರಣೆ ಮಾಡಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಶಾಲೆಯಲ್ಲಿಯೇ ಶಿಕ್ಷಕಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತಂಜಾವೂರು ಜಿಲ್ಲೆಯ ಮಲ್ಲಿಪಟ್ಟಿನಂ ಬಳಿಯ ಚಿನ್ನಮನೈ ನಡೆದಿದೆ.  

ಮೃತ ಶಿಕ್ಷಕಿಯನ್ನು 26 ವರ್ಷದ  ರಮಣಿ ಎಂದು ಗುರುತಿಸಲಾಗಿದೆ. ಚಿನ್ನಮನೈನ 30 ವರ್ಷದ ಮದನ್ ಎಂಬಾತ ರಮಣಿ ಮೇಲೆ ಆರಮಲ್ಲಿಪಟ್ಟಿನಂ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಮಣಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮದುವೆ ವಿಚಾರವಾಗಿ ಮದನ್ ಮತ್ತು ಅವರ ಕುಟುಂಬವು ಕೆಲವು ದಿನಗಳ ಹಿಂದೆ ರಮಣಿಯ ಕುಟುಂಬವನ್ನು ಭೇಟಿಯಾಗಿದ್ದರು. ಈ ವೇಳೆ ಇಬ್ಬರು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈಚೆಗೆ ರಮಣಿ ಮದುವೆಗೆ ನಿರಾಕರಣೆ ಮಾಡಿದ್ದರು.

ಆಕೆಯ ನಿರಾಕರಣೆಯಿಂದ ಕೋಪಗೊಂಡ ಮದನ್ ಬುಧವಾರ ಬೆಳಗ್ಗೆ ಸರ್ಕಾರಿ ಪ್ರೌಢಶಾಲೆಗೆ ತೆರಳಿ ರಮಣಿ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದಾನೆ. ನಂತರ, ಕುತ್ತಿಗೆಗೆ ಆಳವಾದ ಗಾಯವಾಗಿದ್ದ ರಮಣಿಯನ್ನು ಶಾಲೆಯ ಅಧಿಕಾರಿಗಳು ಪಟ್ಟುಕೊಟ್ಟೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಸೇತುಭಾವಛತ್ರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆಗಾಗಿ ಮದನ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಈ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್‌