Select Your Language

Notifications

webdunia
webdunia
webdunia
webdunia

ಯುಎಇ ಸರ್ಕಾರ ಕೇರಳಕ್ಕೆ ನೀಡಿದ ನೆರವನ್ನು ತಿರಸ್ಕರಿಸಿದ ಭಾರತ ಸರ್ಕಾರ

ಯುಎಇ ಸರ್ಕಾರ ಕೇರಳಕ್ಕೆ ನೀಡಿದ ನೆರವನ್ನು ತಿರಸ್ಕರಿಸಿದ ಭಾರತ ಸರ್ಕಾರ
ನವದೆಹಲಿ , ಗುರುವಾರ, 23 ಆಗಸ್ಟ್ 2018 (11:35 IST)
ನವದೆಹಲಿ : ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಕೇರಳಕ್ಕೆ ಸಹಾಯ ಮಾಡಲು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಸರ್ಕಾರ ಮುಂದಾಗಿದ್ದರೂ ಕೂಡ ಭಾರತ ಸರ್ಕಾರ  ಅವರ  ಸಹಾಯವನ್ನು ತಿರಸ್ಕರಿಸಿದೆ.


ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ 100 ಮಿಲಿಯನ್ ಅಮೆರಿಕನ್ ಡಾಲರ್ ನೀಡಲು  ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಸರ್ಕಾರ ನಿರ್ಧರಿಸಿತ್ತು. ಪ್ರವಾಹದಿಂದ ಆಗಿರುವ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಯುಎಇ ಮನವಿಯನ್ನು ಪುರಸ್ಕರಿಸಿ, ಆ ಹಣವನ್ನು ಸ್ವೀಕರಿಸುವಂತೆ ಕೇರಳ ಸರ್ಕಾರ ಕೇಂದ್ರ ಸರ್ಕಾರವನ್ನು ಮನವಿ ಮಾಡಿದರೂ ಕೂಡ ಅದಕ್ಕೆ  ಒಪ್ಪಿಕೊಳ್ಳದ ಕೇಂದ್ರ ಸರ್ಕಾರ ಯುಎಇ ಮನವಿಯನ್ನು ವಿನಮ್ರವಾಗಿಯೇ ತಿರಸ್ಕರಿಸಿದೆ.


ವಿದೇಶಗಳಿಂದ ಹಣದ ಸಹಾಯ ಪಡೆದು ಮುಲಾಜಿಗೆ ಬೀಳುವ ಸನ್ನಿವೇಶವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಸದ್ಯಕ್ಕೆ ದೇಶದ ಆಂತರಿಕ ಪ್ರಯತ್ನಗಳಿಂದಲೇ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದು ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೀಗರ ಔತಣಕ್ಕೆಂದು ಮೀಸಲಿಟ್ಟಿದ್ದ ಹಣವನ್ನು ಕೊಡಗು ಸಂತ್ರಸ್ತರಿಗೆ ನೀಡಿದ ರಾಜ್ಯದ ಸಚಿವರು ಯಾರು ಗೊತ್ತಾ?