Select Your Language

Notifications

webdunia
webdunia
webdunia
webdunia

ಯೋಗಿ ಆದಿತ್ಯನಾಥ್ ವಿರುದ್ಧದ 22 ವರ್ಷಗಳ ಹಿಂದಿನ ಪ್ರಕರಣ ಹಿಂದಕ್ಕೆ ಪಡೆದ ಸರ್ಕಾರ

ಯೋಗಿ ಆದಿತ್ಯನಾಥ್ ವಿರುದ್ಧದ 22 ವರ್ಷಗಳ ಹಿಂದಿನ ಪ್ರಕರಣ ಹಿಂದಕ್ಕೆ ಪಡೆದ ಸರ್ಕಾರ
ಲಕ್ನೊ , ಬುಧವಾರ, 27 ಡಿಸೆಂಬರ್ 2017 (21:48 IST)
ನಿಷೇಧಾಜ್ಞೆ ಉಲ್ಲಂಘಿಸಿ ಸಭೆ ನಡೆಸಿದ ಆರೋಪದ ಮೇರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ದಾಖಲಾಗಿದ್ದ 22 ವರ್ಷ ಹಳೆಯ ಪ್ರಕರಣವನ್ನು ಉತ್ತರ ಸರ್ಕಾರ ಹಿಂಪಡೆದಿದೆ. 

ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಶಿವ ಪ್ರತಾಪ್ ಶುಕ್ಲಾ, ಬಿಜೆಪಿ ಶಾಸಕ ಶೀತಲ್ ಪಾಂಡೆ ಹಾಗೂ ಇತರೆ 10 ಮಂದಿ ವಿರುದ್ಧ ಗೋರಖಪುರ್ ಪಿಪಿಗಂಜಿ ಪೊಲೀಸ್ ಠಾಣೆಯಲ್ಲಿ 1995 ಮೇ 27ರಂದು ಪ್ರಕರಣ ದಾಖಲಾಗಿತ್ತು

ಕ್ರಿಮಿನಲ್ ಅಪರಾಧ ಹೊಂದಿರುವ ಸಂಸದರು, ಶಾಸಕರ ತ್ವರಿತಗತಿ ವಿಚಾರಣೆಗಾಗಿ ವಿಶೇಷ ಕೋರ್ಟ್ ಗಳನ್ನು ಸ್ಥಾಪಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಾವು ಒಳಗೊಂಡಂತೆ 13 ನಾಯಕರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿದ್ದಾರೆ. 

ಈಚೆಗೆ ಉತ್ತರ ಪ್ರದೇಶದಲ್ಲಿನ ವಿವಾದಿತ ಸಂಘಟಿತ ಅಪರಾಧ ನಿಗ್ರಹ ತಿದ್ದುಪಡಿ ಮಸೂದೆ(ಯುಪಿಸಿಓಸಿಬಿ) ಮಂಡಿಸುವ ಮುನ್ನ ಯೋಗಿ ವಿರುದ್ಧದ ಪ್ರಕರಣ ಕೈಬಿಡಲಾಗಿದೆ. ರಾಜಕೀಯ ಪ್ರೇರಿತವಾಗಿ ದಾಖಲಾದ 20 ಸಾವಿರ ಪ್ರಕರಣಗಳನ್ನು ಕೈಬಿಡುತ್ತಿರುವುದಾಗಿ ಯೋಗಿ ಆದಿತ್ಯನಾಥ್ ಸದನಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ವಿವಾದ: ಪರಿಕ್ಕರ್ ಪತ್ರ ರಾಜಕೀಯ ಗಿಮಿಕ್ ಎಂದ ಗೋವಾ ಸಚಿವ