Publish Date: Tue, 26 Dec 2017 (14:42 IST)
Updated Date: Tue, 26 Dec 2017 (14:48 IST)
ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಕುರಿತು ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರಿಗೆ ಕನ್ಮಡ ಪರ ಒಕ್ಕೂಟದಿಂದ ನೈತಿಕ ಬೆಂಬಲ ನೀಡುವುದಾಗಿ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ವಾಟಾಳ ನಾಗರಾಜ್ ಅವರು ಹೇಳಿದ್ದಾರೆ.
ಇಂದು ಅವರು ಹೋರಾಟಗಾರರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ನಾಳೆ ಉತ್ತರ ಕರ್ನಾಟಕ ಬಂದ್ ಗೆ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಹಾಗು ಒಟ್ಟು 2000 ಕನ್ನಡ ಪರ ಸಂಘಟನೆಗಳಿಂದ ಬೆಂಬಲ ನೀಡುತ್ತೆವೆ ಎಂದು ಹೇಳಿದ್ದಾರೆ.
ಮಹದಾಯಿ ಹೋರಾಟ ರಾಜಕೀಯ ತಿರುವು ಪಡೆಯಬಾರದು. ಇದು ರೈತರ ಜೀವನ, ಮರಣದ ಪ್ರಶ್ನೆಯಾಗಿದೆ. ಹಿಂದೆಯೂ ಈ ಹೋರಾಟಕ್ಕೆ ಸಂಬಂಧಿಸಿದಂತೆ ಬಂದ್ ಮಾಡುವುದರ ಮೂಲಕ ಬೆಂಬಲ ನೀಡಿದ್ದೇವೆ. ಇಂದೂ ಕೂಡ ಬೆಂಬಲ ನೀಡುತ್ತೆವೆ. ಸಂಬಂಧಪಟ್ಟವರು ಸ್ಥಳಕ್ಕೆ ಬಂದು ಧರಣಿನಿರತರ ಜೊತೆ ಮಾತನಾಡಬೇಕು ಎಂದು ವಾಟಾಳ ನಾಗರಾಜ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ