ಐಎಸ್‌ಐ ಜತೆ ನಂಟು ಬೆಳೆಸಿ ಖತರ್ನಾಕ್ ಕೆಲಸ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್‌

Sampriya
ಶನಿವಾರ, 22 ನವೆಂಬರ್ 2025 (16:50 IST)
ನವದೆಹಲಿ: ಐಎಸ್‌ಐ ಜತೆ ನಂಟು ಹೊಂದಿದ ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿದ  ದೆಹಲಿ ಪೊಲೀಸರು, ಗ್ಯಾಂಗ್ ಸಂಬಂಧ ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಪಂಜಾಬ್‌ನ ಮಂದೀಪ್ ಸಿಂಗ್ (38), ದಲ್ವಿಂದರ್ ಕುಮಾರ್ (34), ಉತ್ತರ ಪ್ರದೇಶದ ಬಾಗ್‌ಪತ್ ನಿವಾಸಿಗಳಾದ ರೋಹನ್ ತೋಮರ್ (30) ಮತ್ತು ಅಜಯ್ ಅಲಿಯಾಸ್ ಮೋನು (37) ಎಂದು ಗುರುತಿಸಲಾಗಿದೆ.

ಇವರು ಉತ್ತರ ಭಾರತದಾದ್ಯಂತ ಸಂಘಟಿತ ಅಪರಾಧಗಳಿಗೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 

ಈ ಜಾಲವು ಡ್ರೋನ್‌ಗಳನ್ನು ಬಳಸಿ ಪಾಕ್‌ನಿಂದ ಕಳ್ಳಸಾಗಣೆ ಮಾಡಿದ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ದೆಹಲಿ , ಹರಿಯಾಣ, ಉತ್ತರ ಪ್ರದೇಶ ಮತ್ತು ಪಂಜಾಬ್‌ನ ದರೋಡೆಕೋರರಿಗೆ ಪೂರೈಸುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ  ಟರ್ಕಿ ನಿರ್ಮಿತ ಪಿಎಕ್ಸ್ -5.7 ಮಾದರಿಗಳು ಸೇರಿದಂತೆ 10 ಅತ್ಯಾಧುನಿಕ ಪಿಸ್ತೂಲ್‌ಗಳು ಮತ್ತು 92 ಸಜೀವ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೀನು ರಫ್ತಿನಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ: ಸಿದ್ದರಾಮಯ್ಯ

ಮೆಕ್ಕೆಜೋಳ, ಹೆಸರುಕಾಳು ಬೆಳೆಗಾರರ ಸಮಸ್ಯೆ, ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಅಯ್ಯಪ್ಪ ಸ್ವಾಮಿ ಸುಮ್ಮನೆ ಬಿಡುವುದಿಲ್ಲ: ಜಾರ್ಜ್‌ ಕುರಿಯನ್

ಡಿಕೆ ಶಿವಕುಮಾರ್‌ ಸಿಎಂ ಆಗಬೇಕೆಂದ ಮಂಡ್ಯ ಶಾಸಕ, ಕಾರಣ ಕೊಟ್ಟಿದ್ದು ಹಾಗೇ

ಬೆಂಗಳೂರು ದರೋಡೆ ಕೇಸ್: ಒಟ್ಟು ಎಷ್ಟು ಹಣ ಸಿಕ್ಕಿದೆ ಪೊಲೀಸ್ ಆಯುಕ್ತರಿಂದ ಖಚಿತ ಮಾಹಿತಿ

ಮುಂದಿನ ಸುದ್ದಿ
Show comments