Select Your Language

Notifications

webdunia
webdunia
webdunia
webdunia

ಮದುವೆಯಾದ ಮೊದಲ ದಿನವೇ ಮೈದುನನಿಂದ ಅತ್ಯಾಚಾರ!

ಮದುವೆಯಾದ ಮೊದಲ ದಿನವೇ ಮೈದುನನಿಂದ ಅತ್ಯಾಚಾರ!
ಬುಲಂದ್ ಶಹರ್ , ಶುಕ್ರವಾರ, 22 ಡಿಸೆಂಬರ್ 2017 (07:52 IST)
ಅಣ್ಣ ಮದುವೆ ಮಾಡಿಕೊಂಡ ಅತ್ತಿಗೆ ಮೇಲೆ ಮದುವೆಯಾದ ಮೊದಲ ದಿನವೇ ಮೈದುನ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬುಲಂದ್ ಶಹರನ ಕೊಟ್ಟಾಲಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ಅತ್ಯಾಚಾರ ವಿಷಯ ತಿಳಿದ ಪತಿಯು ಪತ್ನಿಗೆ ತಲಾಕ್ ನೀಡಿದ್ದಾನೆ. ಇದರಿಂದ ಮಹಿಳೆ ಬೀದಿಗೆ ಬಿಳುವಂತಾಗಿದೆ.

ಮದುವೆಯ ಮೊದಲ ರಾತ್ರಿ ಗಂಡನ ಸಹೋದರ ಹಾಗೂ ಆತನ ಗೆಳೆಯ ಸೇರಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದು, ಅದರ ವಿಡಿಯೋವನ್ನು ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ವಿಡಿಯೋ ವೈರಲ್‌‌ ಮಾಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ಮಹಿಳೆ ಪತಿಗೆ ತಿಳಿಸಿದಾಗ ಆತ ಹೆಂಡತಿಯ ಸಹಾಯಕ್ಕೆ ನಿಲ್ಲದೆ ತಲಾಖ್‌‌ ನೀಡಿದ್ದಾನೆ. ಸಂತ್ರಸ್ತ ಮಹಿಳೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತೀ ಉದ್ದನೆಯ ಗುಪ್ತಾಂಗ ಇವರದ್ದಂತೆ; ಇದರಿಂದ ಬೇಸತ್ತು ಆ ವ್ಯಕ್ತಿ ಮಾಡಿದ್ದೇನು ಗೊತ್ತಾ…?