Select Your Language

Notifications

webdunia
webdunia
webdunia
webdunia

ರೈತನ ಗಂಟಲಿನಿಂದ ದೊಡ್ಡ ಗಾತ್ರದ ಗಡ್ಡೆ ತೆಗೆದ ವೈದ್ಯರು!

ರೈತನ  ಗಂಟಲಿನಿಂದ ದೊಡ್ಡ ಗಾತ್ರದ ಗಡ್ಡೆ ತೆಗೆದ ವೈದ್ಯರು!
ಪಾಟ್ನಾ , ಶನಿವಾರ, 29 ಅಕ್ಟೋಬರ್ 2022 (11:45 IST)
ಪಾಟ್ನಾ : ಥೈರಾಯ್ಡ್ನಿಂದ ಬಳಲುತ್ತಿದ್ದ ಬಿಹಾರದ 72 ವರ್ಷದ ರೈತನ ಗಂಟಲಿನಿಂದ “ತೆಂಗಿನಕಾಯಿ ಗಾತ್ರದ” ಗೆಡ್ಡೆಯನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದಾರೆ.

ಬೇಗುಸರಾಯ್ ಜಿಲ್ಲೆಯ ನಿವಾಸಿಯಾಗಿರುವ ರೋಗಿ ಕಳೆದ ಆರು ತಿಂಗಳಿನಿಂದ ಉಸಿರಾಟವಾಡಲು ಮತ್ತು ಆಹಾರವನ್ನು ನುಂಗಲು ತೊಂದರೆ ಅನುಭವಿಸುತ್ತಿದ್ದರು.

ಸಮಸ್ಯೆ ಎಷ್ಟರಮಟ್ಟಿಗೆ ಉಲ್ಬಣಗೊಂಡಿತು ಎಂದರೆ ಥೈರಾಯ್ಡ್ ಅವರ ಜೀವನದ ಮೇಲೆಯೇ ಅಡ್ಡ ಪರಿಣಾಮ ಬೀರಿತು. ಹೀಗಾಗಿ ಕಳೆದ ತಿಂಗಳು ರೋಗಿಯನ್ನು ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಇಎನ್ಟಿ ಮತ್ತು ಹೆಡ್, ನೆಕ್ ಆಂಕೊ ಸರ್ಜರಿ ವಿಭಾಗಕ್ಕೆ ಕರೆದೊಯ್ಯಲಾಯಿತು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಹೆಡ್ ಮತ್ತು ನೆಕ್ ಆಂಕೊ ಸರ್ಜರಿ ತಜ್ಞ ಡಾ ಸಂಗೀತ್ ಅಗರ್ವಾಲ್ ಅವರು, ಹಲವಾರು ವರ್ಷಗಳಿಂದ ನಾನು ಇಂತಹ 250ಕ್ಕೂ ಹೆಚ್ಚು ಬೃಹತ್ ಥೈರಾಯ್ಡ್ ಗೆಡ್ಡೆಗಳ ಪ್ರಕರಣಗಳನ್ನು ನಿಭಾಯಿಸಿದ್ದೇನೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ : ನರೇಂದ್ರ ಮೋದಿ