ಸೂರಜ್ಕುಂಡ್ : ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸರಿಗೆ ಒಂದು ದೇಶ ಒಂದು ಸಮವಸ್ತ್ರ ಕಲ್ಪನೆಯನ್ನು ಪ್ರಸ್ತಾಪಿಸಿದ್ದಾರೆ.
ಹರ್ಯಾಣದ ಸೂರಜ್ಕುಂಡ್ನಲ್ಲಿ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳ ಗೃಹ ಸಚಿವರ ಜೊತೆ ಎರಡು ದಿನ ಚಿಂತನ ಶಿಬಿರವನ್ನು ಆಯೋಜಿಸಿದೆ.
ಈ ಶಿಬಿರ ಗುರುವಾರ ಆರಂಭಗೊಂಡಿದ್ದು ಇಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಈ ವೇಳೆ ಒಂದು ದೇಶ ಒಂದು ಸಮವಸ್ತ್ರ ಕಲ್ಪನೆಯನ್ನು ಪ್ರಸ್ತಾಪಿಸಿದ ಮೋದಿ ಇದು ಕೇವಲ ಸಲಹೆಯಾಗಿದೆ. ಇದನ್ನು ನಾನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.