Select Your Language

Notifications

webdunia
webdunia
webdunia
webdunia

ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ, ಉತ್ತಮ ಸಾಧನೆ ತೋರಿದ ಕಾಂಗ್ರೆಸ್

ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ, ಉತ್ತಮ ಸಾಧನೆ ತೋರಿದ ಕಾಂಗ್ರೆಸ್
ಜೈಪುರ್ , ಬುಧವಾರ, 20 ಡಿಸೆಂಬರ್ 2017 (12:11 IST)
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಪಕ್ಷ ರಾಜಸ್ಥಾನದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.

ಗುಜರಾತ್ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿರುವ ಕಾಂಗ್ರೆಸ್ ರಾಜಸ್ತಾನದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದೆ. 

ರಾಜಸ್ತಾನದ 19 ಜಿಲ್ಲೆಗಳ 27 ಜಿಲ್ಲಾ ಪಂಚಾಯಿತಿಗಳಿಗೆ, 12 ಜಿಲ್ಲೆಗಳ 14 ನಗರಪಾಲಿಕೆಗಳು ಹಾಗೂ ನಾಲ್ಕು ಜಿಲ್ಲಾ ಪರಿಷತ್‍ಗಳಿಗೆ ಡಿ.17ರಂದು ಉಪಚುನಾವಣೆ ನಡೆದಿತ್ತು. 
 
ಜಿಲ್ಲಾ ಪರಿಷತನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳು ಕಾಂಗ್ರೆಸ್ ಗೆದ್ದುಕೊಂಡಿದೆ. 27 ಪಂಚಾಯಿತಿ ಸ್ಥಾನಗಳಲ್ಲಿ 16 ಮತ್ತು ಆರು ನಗರ ಪಾಲಿಕೆ ಸ್ಥಾನಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿದ್ದು ಪಕ್ಷದ ಪ್ರಾಬಲ್ಯ ಉಳಿಸಿಕೊಂಡಿದೆ.
 
ಆದರೆ, ಬಿಜೆಪಿ ತನ್ನ ಹಿಡಿತದಲ್ಲಿದ್ದ ನಾಲ್ಕು ಜಿಲ್ಲಾ ಪರಿಷತ್ ಸ್ಥಾನಗಳನ್ನು ಕಳೆದುಕೊಂಡಿದೆ. ಕೇವಲ 10 ಪಂಚಾಯಿತಿ ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಲು ಸಫಲವಾಗಿದ್ದು, ಏಳು ನಗರಪಾಲಿಕೆ ಸ್ಥಾನಗಳಲ್ಲಿ ಗೆಲುವು ಕಂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋಮಾದಲ್ಲಿದ್ದ ಜಯಲಲಿತಾ ಜ್ಯೂಸ್ ಕುಡಿಯಲು ಎದ್ದು ಕೂತಿದ್ದು ಹೇಗೆ?!