Publish Date: Fri, 03 Jun 2022 (14:41 IST)
Updated Date: Fri, 03 Jun 2022 (17:33 IST)
ಮುಂಬೈ : ಮಹಿಳೆಯೊಬ್ಬಳು ತನ್ನ ನಾಲ್ಕು ತಿಂಗಳ ಮಗಳು ಹಾಗೂ 2 ವರ್ಷದ ಮಗ ನಿರಂತರವಾಗಿ ಅಳುತ್ತಿವೆ ಎಂದು ಇಬ್ಬರನ್ನು ಕೊಂದು ನಂತರ ಅವರ ದೇಹವನ್ನು ಸುಟ್ಟ ಅಮಾನವೀಯ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಧುರ್ಪಾದಬಾಯಿ ಗಣಪತ್ ನಿಮಲ್ವಾಡ್ (30) ಆರೋಪಿ. ಆಕೆಯ ತಾಯಿ ಮತ್ತು ಸಹೋದರ ಮಕ್ಕಳ ಶವಗಳನ್ನು ಸುಡಲು ಸಹಾಯ ಮಾಡಿದರು.
ಮೇ 31 ಮತ್ತು ಜೂನ್ 1 ರಂದು ಸತತ ಎರಡು ದಿನಗಳಲ್ಲಿ ಜಿಲ್ಲೆಯ ಭೋಕರ್ ತಾಲೂಕಿನ ಪಾಂಡುರ್ನಾ ಗ್ರಾಮದಲ್ಲಿ ಹತ್ಯೆಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೇ. 31ರಂದು ಧುರ್ಪಾದಬಾಯಿಯ ನಾಲ್ಕು ತಿಂಗಳ ಮಗಳು ಅನುಸೂಯಾ ತುಂಬಾ ಅಳುತ್ತಿದ್ದಳು. ಇದರಿಂದ ಕೋಪಗೊಂಡ ಧುರ್ಪಾದಬಾಯಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾಳೆ.
ಮರುದಿನ ಮಗನು ಅಳುತ್ತಿದ್ದನ್ನು ನೋಡಿ ಕೋಪಗೊಂಡು ಆತನ ಕತ್ತನ್ನು ಹಿಸುಕಿ ಕೊಂದಿದ್ದಾಳೆ.