Select Your Language

Notifications

webdunia
webdunia
webdunia
webdunia

ಪ್ರಿಯಕರನೊಂದಿಗೆ ಸೇರಿಕೊಂಡು ಮಗುವನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದ ಕ್ರೂರಿ!

ಪ್ರಿಯಕರನೊಂದಿಗೆ ಸೇರಿಕೊಂಡು ಮಗುವನ್ನು ಗೋಣಿ ಚೀಲದಲ್ಲಿ ಕಟ್ಟಿ ಎಸೆದ ಕ್ರೂರಿ!
ತಿರುವನಂತಪುರಂ , ಗುರುವಾರ, 23 ಡಿಸೆಂಬರ್ 2021 (15:29 IST)
ತಿರುವನಂತಪುರಂ : ನವಜಾತ ಶಿಶುವನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿ ಕಾಲುವೆಗೆ ಬೀಸಾಕಿದ್ದ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.
 
ಆರೋಪಿಗಳನ್ನು ಮೇಘಾ (22) ಮತ್ತು ಮ್ಯಾನುಯೆಲ್ (25) ಮತ್ತು ಆತನ ಸ್ನೇಹಿತ ಅಮಲ್ (24) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಗೋಣಿಚೀಲದಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಈ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಗುವಿನ ಶವವನ್ನು ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಈ ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ವೀಡಿಯೋದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಗೋಣೀಚೀಲವನ್ನು ಕಾಲುವೆಗೆ ಎಸೆದುಹೋಗಿರುವುದು ಕಂಡು ಬಂದಿದೆ. ನಂತರ ವರಾಯಿಡಂ ಮೂಲದ ಆರೋಪಿ ಮ್ಯಾನುಯೆಲ್ ಮತ್ತು ಆತನ ಸ್ನೇಹಿತ ಅಮಲ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು.

ಈ ವೇಳೆ ಮೇಘಾ ಮತ್ತು ಮ್ಯಾನುಯೆಲ್ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮೇಘಾ ಗರ್ಭಿಣಿಯಾದಾಗ ಈ ವಿಚಾರವನ್ನು ಇಬ್ಬರು ಕುಟುಂಬದವರಿಂದ ಮರೆಮಾಚಿದ್ದರು. ಆದರೆ ಶನಿವಾರ ಮೇಘಾ ತನ್ನ ಕೋಣೆಯಲ್ಲಿ ಮಗುವಿಗೆ ಜನ್ಮನೀಡಿದ್ದಾಳೆ. ನಂತರ ಮಗುವನ್ನು ಬಕೆಟ್ನಲ್ಲಿ ಮುಳುಗಿಸಿ ಕೊಂದಿದ್ದು, ನಂತರ ಮಗುವನ್ನು ಗೋಣಿ ಚೀಲದಲ್ಲಿ ಸುತ್ತಿ, ಮ್ಯಾನುಯೆಲ್ಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾಳೆ.

 ಮರುದಿನ ಬೆಳಗ್ಗೆ ಮೇಘಾ ತನ್ನ ಸ್ನೇಹಿತನ ಸಹಾಯದೊಂದಿಗೆ ಗೋಣಿ ಚೀಲವನ್ನು ಮ್ಯಾನುಯೆಲ್ಗೆ ತಲುಪಿಸಿದ್ದಾಳೆ. ಮೊದಲಿಗೆ ಮಗುವಿನ ಶವವನ್ನು ಸುಡಲು 150 ರೂ. ಪೆಟ್ರೋಲ್ ಅನ್ನು ಖರೀದಿಸಿದ್ದ ಮ್ಯಾನುಯೆಲ್ ಸುಡಲು ಸಾಧ್ಯವಾಗದೇ ಹೂಳಲು ಪೇರಮಂಗಲಕ್ಕೆ ಆಗಮಿಸಿದ್ದನು. ಈ ವೇಳೆ ಜನರಿದ್ದ ಕಾರಣ ಹೂಳಲು ಸಾಧ್ಯವಾಗದೇ ನಂತರ ಕಾಲುವೆಗೆ ಎಸೆದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ!