Select Your Language

Notifications

webdunia
webdunia
webdunia
Tuesday, 1 April 2025
webdunia

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ರೇಪ್ ಎಸಗಿದ ಆರೋಪಿ ಬಂಧನ

kidnap
koudal , ಗುರುವಾರ, 14 ಡಿಸೆಂಬರ್ 2023 (01:38 IST)
ಅಪ್ರಾಪ್ತ ಬಾಲಕಿಯನ್ನುರೈಲ್ವೆ ನಿಲ್ದಾಣದ ಹಿಂದಿರುವ ವಿಶ್ರಾಂತಿ ಕೊಠಡಿಗೆ ಕರೆದುಕೊಂಡ ಹೋದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಮಾರನೇ ದಿನ ಬೇರೆ ಬೇರೆ ಸ್ಥಳಗಳಲ್ಲಿ ಕರೆದೆುಕೊಂಡು ಹೋಗಿ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. 
 
ಅಪ್ರಾಪ್ತ ಬಾಲಕಿಯನ್ನು 20 ದಿನಗಳ ಹಿಂದೆ ಅಪಹರಿಸಿ ಅತ್ಯಾಚಾರವೆಸಗಿದ್ದಲ್ಲದೇ ಆಕೆಯನ್ನು ಭಿಕ್ಷಾಟನೆಗೆ ತಳ್ಳಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಗಂಜಾಮ್ ಜಿಲ್ಲೆಯ ಕೌಡಿಯಾ ಗ್ರಾಮದಲ್ಲಿ ವರದಿಯಾಗಿದೆ.
 
30 ವರ್ಷ ವಯಸ್ಸಿನ ಆರೋಪಿ ನಾರಾಯಣ್ ದಾಸ್ ಬರಿಗುಡಾ ಗ್ರಾಮದವನಾಗಿದ್ದು ನವೆಂಬರ್ 25 ರಂದು ಕಾರ್ತಿಕ ಪೂರ್ಣಿಮಾ ಹಬ್ಬದ ಆಚರಣೆ ನೋಡಲು ಬಂದಿದ್ದ ಎರಡನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ರೈಲ್ವೆ ನಿಲ್ದಾಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿ ವಿಚಾರಣೆ ನಡೆಸಿದಾಗ, ಆರೋಪಿ ಅತ್ಯಾಚಾರವೆಸಗಿರುವ ಬಗ್ಗೆ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
 
ಬಾಲಕಿಯ ಕಿವಿಯೋಲೆಗಳನ್ನು ತೆಗೆದು ಅದನ್ನು 2000 ರೂಪಾಯಿಗಳಿಗೆ ಚಿನ್ನಾಭರಣ ಮಳಿಗೆಯಲ್ಲಿ ಮಾರಾಟ ಮಾಡಿ, ಬಂದ ಹಣದಿಂದ ಮೊಬೈಲ್ ಖರೀದಿಸಿದ್ದಾನೆ. ರೈಲ್ವೆ ನಿಲ್ದಾಣದಲ್ಲಿ ಅಳುತ್ತಾ ನಿಂತಿದ್ದ ಬಾಲಕಿ ರೈಲ್ವೆ ಪೊಲೀಸರ ಕಣ್ಣಿಗೆ ಬಿದ್ದಿದ್ದರಿಂದ ಆರೋಪಿಯ ಹೇಯ ಕೃತ್ಯ ಬಹಿರಂಗವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆ ಮೇಲೆ 3 ಬಾರಿ ಅತ್ಯಾಚಾರ