Select Your Language

Notifications

webdunia
webdunia
webdunia
webdunia

ಚಲಿಸುತ್ತಿರುವ ಅಟೋದಲ್ಲಿಯೇ ರೇಪ್‌ಗೆ ಯತ್ನ: ಯುವತಿ ಮಾಡಿದ್ದೇನು ಗೊತ್ತಾ?

woman
kolkatta , ಬುಧವಾರ, 13 ಡಿಸೆಂಬರ್ 2023 (13:32 IST)
ಮಹಿಳೆ ಗ್ರಾಮಕ್ಕೆ ತೆರಳಲು ಅಟೋ ಹತ್ತಿದ್ದಳು. ಅಟೋದಲ್ಲಿ ಚಾಲಕನನ್ನು ಹೊರತುಪಡಿಸಿ ಇತರ ಇಬ್ಬರು ವ್ಯಕ್ತಿಗಳು ಕುಳಿತಿದ್ದರು.ಅಟೋ ಸಾಗುತ್ತಿದ್ದಂತೆ ಇಬ್ಬರು ಆರೋಪಿಗಳು ಆಕೆಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅಟೋ ಚಾಲಕ ತನ್ನ ವಾಹನವನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಇದನ್ನು ಅರಿತ ಮಹಿಳೆ ಅಟೋದಿಂದ ಹಾರಿ ತನ್ನ ಶೀಲವನ್ನು ಉಳಿಸಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅಟೋ ಚಾಲಕನೊಬ್ಬ ಪ್ರಯಾಣಿಕಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ, ಮಹಿಳೆ ವೇಗವಾಗಿ ಸಾಗುತ್ತಿದ್ದ ಅಟೋದಿಂದ ಹಾರಿ ತನ್ನ ಮಾನವನ್ನು ಉಳಿಸಿಕೊಂಡ ಘಟನೆ ಮಹಿಮಾಲೂರು ಕ್ರಾಸ ಬಳಿ ವರದಿಯಾಗಿದೆ. 
 
ಮುಂದಾಗುವ ಘಟನೆಯ ಬಗ್ಗೆ ಎಚ್ಚೆತ್ತುಕೊಂಡ ಮಹಿಳೆ ಅಟೋದಿಂದ ಹೊರಹಾರಿದ್ದಾಳೆ. ದಾರಿಹೋಕರು ಆಕೆಯ ಸ್ಥಿತಿಯನ್ನು ಗಮನಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
 
ಪೊಲೀಸ್ ಠಾಣೆಯಲ್ಲಿ ಅಟೋಚಾಲಕ ಮತ್ತು ಇತರ ಇಬ್ಬರು ಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ ಯತ್ನ ದೂರು ದಾಖಲಿಸಿದ್ದಾಳೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಪ್‌ಗೊಳಗಾಗಿದ್ದೇನೆ ಎಂದ ಪತ್ನಿ: ಕೋಪಗೊಂಡ ಪತಿ ಮಾಡಿದ್ದೇನು ಗೊತ್ತಾ?