Select Your Language

Notifications

webdunia
webdunia
webdunia
webdunia

ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಗಳು ಬಳಸುತ್ತಿದ್ದ ಕೋಡ್ ಗೊತ್ತೆ?

couple
patna , ಬುಧವಾರ, 13 ಡಿಸೆಂಬರ್ 2023 (10:31 IST)
ಬಿಹಾರ್ ಸೈಬರ್ ಅಪರಾಧ ವಿಭಾಗದ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಗಳನ್ನು  ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಹಕರಿಗೆ ಹಗ್ ಮಿ ಎನ್ನುವ ಕೋಡ್ ಬಳಸುತ್ತಿದ್ದರು  ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಇಂಟರ್‌ನೆಟ್‌ನಲ್ಲಿ ಮಕ್ಕಳು ಮತ್ತು ಸುಂದರವಾದ ಯುವತಿಯರ ಫೋಟೋಗಳನ್ನು ಹಾಕಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ 12 ಕ್ಕೂ ಹೆಚ್ಚು ಜನರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.
 
ಬಿಗ್ ಡ್ಯಾಡಿ ಎನ್ನುವ ಕೋಡ್ ಹೆಸರನ್ನು ಹೊಂದಿದ್ದ ಪೊಲೀಸರ ತಂಡ, ಕರ್ನಾಟಕ ಮೂಲದ ಇಬ್ಬರು ಸಹೋದರಿಯರು ಸೇರಿದಂತೆ ನಾಲ್ಕು ಮಂದಿ ಮಹಿಳೆಯರನ್ನು ಬಂಧಿಸಿದೆ. ಪೊಲೀಸರ ವಾಹನ ನೋಡುತ್ತಿದ್ದಂತೆ ಕೆಲವರು ಪರಾರಿಯಾಗಿದ್ದು ಅವರನ್ನು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ತಿಳಿಸಿದ್ದಾರೆ. 
 
ಕಳೆದ ಒಂದು ವರ್ಷದಿಂದ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ರಾಹುಲ್ ಪಸುಪಾಲನ್ ಮತ್ತು ಆತನ ಪತ್ನಿ ರೇಷ್ಮಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದರು. 
 
ಕಳೆದ ವರ್ಷ ಪಾಟ್ನಾದಲ್ಲಿ ಪ್ರೇಮಿಗಳಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ಖ್ಯಾತರಾಗಿದ್ದ ದಂಪತಿಗಳು ಇದೀಗ ಕೃಷ್ಣನ ಜನ್ಮ ಸ್ಥಾನ ಸೇರಿದ್ದಾರೆ. 
 
ಪೊಲೀಸರು ಗಿರಾಕಿಗಳಂತೆ ನಟಿಸಿ, ಆನ್‌ಲೈನ್ ಸೆಕ್ಸ್ ರಾಕೆಟ್‌‍ ನಡೆಸುತ್ತಿದ್ದ ತಂಡದ ಮುಖ್ಯಸ್ಥ ಅಕ್ಬರ್ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ದೇಶದಲ್ಲಿ ಅತಿ ಕಡಿಮೆ ದರಕ್ಕೆ ಲೈಂಗಿಕ ಸುಖ ನೀಡುವ ವೇಶ್ಯೆಯರು