Select Your Language

Notifications

webdunia
webdunia
webdunia
webdunia

ಅನಿಲ ಸೋರಿಕೆಯಿಂದ ಭೀಕರ ಸ್ಫೋಟ! 4 ಸಾವು, ಒಬ್ಬರಿಗೆ ಗಾಯ

ಅನಿಲ ಸೋರಿಕೆಯಿಂದ ಭೀಕರ ಸ್ಫೋಟ!  4 ಸಾವು, ಒಬ್ಬರಿಗೆ ಗಾಯ
ಅಮರಾವತಿ , ಮಂಗಳವಾರ, 27 ಡಿಸೆಂಬರ್ 2022 (10:36 IST)
ಅಮರಾವತಿ : ಔಷಧಿ ಅಂಗಡಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಭೀಕರ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿವೆ.

ವಿಶಾಖಪಟ್ಟಣಂ ಸಮೀಪದ ಅನಕಪಲ್ಲಿ ಜಿಲ್ಲೆಯ ಜವಾಹರಲಾಲ್ ನೆಹರು ಫಾರ್ಮಸಿಯಲ್ಲಿ ಸೋಮವಾರ ಈ ಭೀಕರ ಘಟನೆ ನಡೆದಿದೆ. ಸಂಜೆ 3 ಗಂಟೆ ವೇಳೆಗೆ ಫಾರ್ಮಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಔಷಧ ಅಂಗಡಿಯಲ್ಲಿದ್ದ ಕೆಲಸಗಾರರು ಬೆಂಕಿಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ಅನಿಲ ಸೋರಿಕೆ ಹಿನ್ನೆಲೆ ಭೀಕರ ಸ್ಫೋಟ ಸಂಭವಿಸಿದೆ. 

ಔಷಧಾಲಯದ ಆಡಳಿತದ ಪ್ರಕಾರ, ವಿಶಾಖಪಟ್ಟಣಂನ ಫಾರ್ಮಾ ಸಿಟಿಯಲ್ಲಿರುವ ಲಾರಸ್ ಕಂಪನಿಯ ಯುನಿಟ್-3ರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಸಂಭವಿಸಿದೆ. ಸ್ಫೋಟ ಉಂಟಾದ ಬಳಿಕ ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಹತ್ಯೆಗೈದ ಪ್ರಿಯಕರ!