Publish Date: Sat, 04 Mar 2023 (08:38 IST)
Updated Date: Sat, 04 Mar 2023 (08:52 IST)
ಚಂಡೀಗಢ : ಹರಿಯಾಣದ ಪ್ರತ್ಯೇಕ ಮೂರು ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 17 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಅಂಬಾಲಾದ ಶಹಜಾದ್ಪುರದ ಕಕ್ಕರ್ ಮಜ್ರಾ ಗ್ರಾಮದ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ 8 ಜನರು ಮೃತಪಟ್ಟಿದ್ದಾರೆ.
ಬಸ್ ಉತ್ತರ ಪ್ರದೇಶದ ಬರೇಲಿಯಿಂದ ಹಿಮಾಚಲ ಪ್ರದೇಶದ ಬಡ್ಡಿಗೆ ತೆರಳುತ್ತಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಶುಕ್ರವಾರ ನಸುಕಿನಲ್ಲಿ ಎನ್ಎಚ್-44 ರ ಸಮಲ್ಖಾದ ಜತಿಪುರ್ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಝಾ ಗ್ರಾಮದ ನಿವಾಸಿಗಳು ಟ್ರ್ಯಾಕ್ಟರ್ನಲ್ಲಿ ಸಮಲ್ಖಾದ ಚುಲ್ಕಾನಾ ಗ್ರಾಮದ ಖತು ಶ್ಯಾಮ್ ಧಾಮಕ್ಕೆ ಭೇಟಿ ನೀಡಿ ಊರಿಗೆ ವಾಪಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಮತ್ತೊಂದು ಪ್ರಕರಣದಲ್ಲಿ, ಫರಿದಾಬಾದ್-ಗುರುಗ್ರಾಮ್ ಹೆದ್ದಾರಿಯ ಮಾಂಗರ್ ಚೌಕ್ ಬಳಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.