Select Your Language

Notifications

webdunia
webdunia
webdunia
webdunia

ಅಪಘಾತದ ದೃಶ್ಯ CCTVಯಲ್ಲಿ ಸೆರೆ

ಅಪಘಾತದ ದೃಶ್ಯ CCTVಯಲ್ಲಿ ಸೆರೆ
ಕುಣಿಗಲ್ , ಗುರುವಾರ, 9 ಫೆಬ್ರವರಿ 2023 (18:15 IST)
ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ಐವರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾದ ಘಟನೆ ತುಮಕುರಿನ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಅಂಚೇಪಾಳ್ಯ ಸಮೀಪ ನಡೆದಿದೆ. ಈ ಎರಡೂ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮೊದಲ ಪ್ರಕರಣದಲ್ಲಿ  ಮನು ಎಂಬ ಯುವಕ ಕೆಲಸದ ನಿಮತ ಬೈಕ್‌ನಲ್ಲಿ ಅಂಚೇಪಾಳ್ಯಕ್ಕೆ ಬಂದು ಹೋಟೆಲ್ ಮುಂಭಾದದ ರಸ್ತೆ ಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದ. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡ ಬದಿಗೆ  ಅತಿ ವೇಗವಾಗಿ ನುಗ್ಗಿತು, ಇದನ್ನು ಗಮನಿಸಿದ ಮನು ಕ್ಷರ್ಣಾದದಲ್ಲಿ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಕ್ಯಾಂಟರ್ ಬೈಕ್ ಮೇಲೆ ಹರಿದು ಬೈಕ್ ಸಂಪೂರ್ಣ ನಜ್ಜು ನುಜ್ಜಾಯಿತು, ಮನು ಎಚ್ಚರಗೊಳ್ಳದಿದ್ದಲ್ಲಿ ಆತನ ಸಾವು ಕಟ್ಟಿಟ್ಟ ಬುತ್ತಿಯಾಗಿತ್ತು, ಕ್ಷಣಾರ್ಧಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಮತ್ತೋಂದು ಘಟನೆಯಲ್ಲಿ ಬೆಂಗಳೂರಿನಿಂದ ಕುಣಿಗಲ್ ತಾಲೂಕಿನ ಅಮೃತೂರಿಗೆ ಹೋಗುತಿದ್ದ ಇನ್ನೋವಾ ಕಾರು ಪಲ್ಟಿಯಾಗಿದೆ. ರಸ್ತೆ ಮೇಲಿನ ಹಂಪ್ಸ್ ಅರಿಯೇ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಇನ್ನೋವಾ ಕಾರು ಹೊಟೆಕ್ ಮುಂದೆ ನಿಂತಿದ್ದ ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದು ಪಲ್ಟಿಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ದಿನಗಳ ಬಳಿಕ ಯುವಕನ ಶವ ಪತ್ತೆ