Select Your Language

Notifications

webdunia
webdunia
webdunia
webdunia

ನಾಲ್ಕು ದಿನಗಳ ಬಳಿಕ ಯುವಕನ ಶವ ಪತ್ತೆ

Four days later
ಕುಣಿಗಲ್ , ಗುರುವಾರ, 9 ಫೆಬ್ರವರಿ 2023 (18:11 IST)
ಹಣಕಾಸು ವಿಷಯಕ್ಕೆ ಮೃತ ಯುವಕ ಲಿಖಿತ್‌ಗೌಡ ನನ್ನ ನವೀನ್ ಹಾಗೂ ಸಾಗರ್ ಎಂಬಿಬ್ಬರು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ. ಇಂದು ಬೆಳಿಗ್ಗೆಯಿಂದಲೂ ತೀವ್ರ ಶೋಧಕಾರ್ಯ ನಡೆಸಿದ್ದ ನೂರಕ್ಕೂ ಹೆಚ್ಚು ಪೊಲೀಸರಿಗೆ ಇದೀಗ ಆತನ ಶವ ನಾಲ್ಕು ದಿನದ ಬಳಿಕ ಹಾಸನ ತಾಲ್ಲೂಕಿನ ಯೋಗೀಹಳ್ಳಿ ಫಾರೆಸ್ಟ್‌‌ನಲ್ಲಿ ಪತ್ತೆಯಾಗಿದೆ. ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ಗೌಡ, ನವೀನ್ ಎಂಬಾತನಿಗೆ 2.5 ಲಕ್ಷ ರೂ ಸಾಲವನ್ನ ಕೊಟ್ಟಿದ್ದಾನೆ. ಕೊಟ್ಟ ಹಣ ವಾಪಾಸ್ ಕೊಡುವಂತೆ ನವೀನ್ ಬೆನ್ನುಬಿದ್ದಿದ್ದ ಲಿಖಿತ್. ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಲಿಖಿತ್‌ಗೌಡ ಹತ್ತು ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ, ನವೀನ್​ನ ಆ್ಯಕ್ವಿವ್ ಹೋಂಡಾ ಬೈಕ್ ಸೀಜ಼್ ಮಾಡಿಕೊಂಡು ಬಂದಿದ್ದಾನೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ನವೀನ್ ಜೊತೆ ಪುನಃ ಜಗಳ ನಡೆದಿದೆ. ಫೆ.5 ರಂದು ಸಂಜೆ 6.30 ಸುಮಾರಿನಲ್ಲಿ ಹಣ ಕೊಡುವುದಾಗಿ ಕೆಎ-41-ಎಂಎ-9231 ನಂಬರ್‌ನ ಓಮಿನಿ ಕಾರಿನಲ್ಲಿ ಕರೆದುಕೊಂಡು ಹೋಗಿರುವ ನವೀನ್ ಹಾಗೂ ಸಾಗರ್ ಲಿಖಿತ್‌ಗೌಡನನ್ನು ಕೊಲೆ ಮಾಡಿದ್ದಾರೆ. ಅಂದಿನಿಂದಲೂ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಕುರಿತು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಅವರಿಗೆ ವರುಣ ಸಹ ಕಷ್ಟ