Select Your Language

Notifications

webdunia
webdunia
webdunia
webdunia

ಆಳವಾದ ಕಂದರಕ್ಕೆ ಉರುಳಿದ ಬಸ್, ಕಾರು : 30 ಮಂದಿ ದುರ್ಮರಣ!

ಆಳವಾದ ಕಂದರಕ್ಕೆ ಉರುಳಿದ ಬಸ್, ಕಾರು : 30 ಮಂದಿ ದುರ್ಮರಣ!
ಇಸ್ಲಾಮಾಬಾದ್ , ಬುಧವಾರ, 8 ಫೆಬ್ರವರಿ 2023 (10:40 IST)
ಇಸ್ಲಾಮಾಬಾದ್ : ಪ್ರಯಾಣಿಕರಿದ್ದ ಬಸ್ ಮತ್ತು ಕಾರು ಆಳವಾದ ಕಂದರಕ್ಕೆ ಉರುಳಿ ಬಿದ್ದ ಪರಿಣಾಮ 30 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ದಾರುಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
 
ಇಲ್ಲಿನ ಖೈಬರ್ ಪಖ್ತುಂಖ್ವಾದ ಕೊಹಿಸ್ತಾನ್ ಜಿಲ್ಲೆಯ ಕಾರಕೋರಂ ಹೆದ್ದಾರಿಯಲ್ಲಿ ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನಂತರ ಕಂದರಕ್ಕೆ ಉರುಳಿ ಬಿದ್ದಿವೆ.

ಬಸ್ ಗಿಲ್ಗಿಟ್ನಿಂದ ರಾವಲ್ಪಿಂಡಿಗೆ ಹೋಗುತ್ತಿದ್ದಾಗ ಶಿಥಿಯಾಲ್ ಪ್ರದೇಶದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಭೀಕರ ರಸ್ತೆ ಅಪಘಾತಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮರುಕ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಅವರು, ಅಗಲಿದವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಮುಖ್ಯಮಂತ್ರಿ ಕೂಡ ಬಸ್ ಅಪಘಾತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ವಧು, ವರರ ನಯಾ ಟ್ರೆಂಡ್ : ಏನಿದು ಮ್ಯಾರೇಜ್ ಕಂಡೀಷನ್?