Select Your Language

Notifications

webdunia
webdunia
webdunia
webdunia

ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಟೆಕ್ಕಿ!

ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಟೆಕ್ಕಿ!
ಹೈದರಾಬಾದ್ , ಬುಧವಾರ, 15 ಡಿಸೆಂಬರ್ 2021 (08:23 IST)
ಹೈದರಾಬಾದ್ : ಆರ್ಥಿಕ ಸಮಸ್ಯೆಯಿಂದಾಗಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಕೊಂದು ತಾವು ನೇಣು ಬೀಗಿದುಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.

ಸ್ವಾತಿ ಕುಸುಮಾ (32) ಮೃತ ಮಹಿಳೆ. ಕೊರೊನಾ ಲಾಕ್ಡೌನ್ ಸಮಯದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸ್ವಾತಿ ಕುಸುಮಾ ಹಾಗೂ ಅವರ ಪತಿ ಸಾಯಿಕುಮಾರ್ ಉದ್ಯೋಗವನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಹಣದ ಸಮಸ್ಯೆ ಉಂಟಾಗಿತ್ತು.

ಆಕೆಯ ಪತಿ ಆರ್ಥಿಕ ಸಮಸ್ಯೆಯಿಂದಾಗಿ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೂ ತನ್ನ ಪತಿ ಕುಟುಂಬವನ್ನು ಪೋಷಿಸಲು ಸಾಕಾಗುವಷ್ಟು ದುಡಿಯುತ್ತಿಲ್ಲ ಎಂದು ಬೇಸರದಿಂದ ಮನನೊಂದಿದ್ದರು.

ಸ್ವಾತಿ ಅವರಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ದಂಪತಿ ಆಗಾಗೆ ಜಗಳವಾಡುತ್ತಿದ್ದರು. ಈ ಜಗಳ ಅತಿಯಾಗಿ ಸಾಯಿಕುಮಾರ್ ಮನೆ ಬಿಟ್ಟು ಹೋಗಿದ್ದರು. ಇದರಿಂದಾಗಿ ಮನನೊಂದ ಸ್ವಾತಿ ಮಲಗುವ ಕೋಣೆಯ ಗೋಡೆಯ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಕರುನಾಡಿಗೆ ರಿಲೀಫ್?