ಶಿಕ್ಷಕಿ ಮೇಲೆ ಬಸ್ ನಲ್ಲಿ ಲೈಂಗಿಕ ಕಿರುಕುಳ: ಮೂಕ ಪ್ರೇಕ್ಷಕರಾದ ಸಹ ಪ್ರಯಾಣಿಕರು

Webdunia
ಭಾನುವಾರ, 6 ಮಾರ್ಚ್ 2022 (09:30 IST)
ಕೋಝಿಕ್ಕೋಡ್: ಕೇರಳ ಸರ್ಕಾರಿ ಬಸ್ ನಲ್ಲಿ ರಾತ್ರಿ ಪ್ರಯಾಣದ ವೇಳೆ ಶಿಕ್ಷಕಿಯೊಬ್ಬರ ಮೇಲೆ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಇದೀಗ ಸಂಚಲನ ಮೂಡಿಸಿದೆ.

ಕೋಝಿಕ್ಕೋಡ್ ಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದ ಅಧ್ಯಾಪಿಕೆ ಮೇಲೆ ಹಿಂದೆ ಕುಳಿತಿದ್ದ ಸಹ ಪ್ರಯಾಣಿಕ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ಶಿಕ್ಷಕಿ ಪ್ರಶ್ನಿಸಿದಾಗ ಆತ ಕ್ಷಮೆ ಕೇಳುವವನಂತೆ ನಾಟಕವಾಡಿದ್ದ. ಈ ಬಗ್ಗೆ ಶಿಕ್ಷಕಿ ಮತ್ತು ಕಾಮುಕನ ನಡುವೆ ಬಸ್ ನಲ್ಲಿ ಜೋರಾಗಿ ವಾಗ್ವಾದ ನಡೆದಿತ್ತು.

ವಿಪರ್ಯಾಸವೆಂದರೆ ಶಿಕ್ಷಕಿ ಈ ಬಗ್ಗೆ ಬಸ್ ಡ್ರೈವರ್, ಕಂಡಕ್ಟರ್ ಗೆ ದೂರು ನೀಡಿದರೂ ಅವರು ಸ್ಪಂದಿಸಿರಲಿಲ್ಲ. ಸಹ ಪ್ರಯಾಣಿಕರಿಗೆ ಹೇಳಿದಾಗಲೂ ಅವರು ಸಿನಿಮಾ ರೀತಿ ಈ ದೃಶ್ಯಗಳನ್ನು ನೋಡುತ್ತಿದ್ದರೇ ವಿನಹ ಸ್ಪಂದಿಸಿರಲಿಲ್ಲ.

ಈ ಸಂಬಂಧ ಶಿಕ್ಷಕಿ ಫೇಸ್ ಬುಕ್ ನಲ್ಲಿ ವಿಡಿಯೋ ಪ್ರಕಟಿಸಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಇದರ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಕೇರಳ ಸಾರಿಗೆ ಸಚಿವರೂ ಶಿಕ್ಷಕಿ ಸಹಾಯಕ್ಕೆ ಬಾರದ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಜಿ ಪ್ರಧಾನಿ ಎಚ್ ದೇವೇಗೌಡರ ಆರೋಗ್ಯದ ಬಗ್ಗೆ ಕುಮಾರಸ್ವಾಮಿಯಿಂದ ಬಿಗ್‌ ಅಪ್ಡೇಟ್‌

17 ಮಕ್ಕಳು ಸಾವು ಪ್ರಕರಣ: ಕೆಮ್ಮಿನ ಮೂರು ಸಿರಪ್ ತಯಾರಿಕೆಗೆ ಬ್ರೇಕ್‌

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಶೂ ಎಸೆದ ಪ್ರಕರಣ: ನನ್ನ ಸಹೋದರನಿಗೆ ತುಂಬಾನೇ ನೋವಾಗಿದೆ ಎಂದ ಸಿಜೆಐ

ಮೈಸೂರು ರೇಪ್ ಆಂಡ್ ಮರ್ಡರ್ ಕೇಸ್‌: ಆರೋಪಿಯ ಗುರುತು ಕೊನೆಗೂ ಪತ್ತೆ

ಮುಂದಿನ ಸುದ್ದಿ