ಚೆನ್ನೈ: ಸಾಮಾನ್ಯವಾಗಿ ಯಾವುದೇ ಕಾಯಿದೆಗಳು ಜಾರಿಯಾಗಬೇಕಾದರೆ ರಾಜ್ಯಪಾಲರ ಅಥವಾ ರಾಷ್ಟ್ರಪತಿಗಳ ಅಂಕಿತ ಬೇಕು. ಆದರೆ ತಮಿಳುನಾಡು ಈಗ ಹೊಸ ಇತಿಹಾಸ ಬರೆದಿದೆ. ರಾಜ್ಯಪಾಲರು, ರಾಷ್ಟ್ರಪತಿಗಳ ಅಂಕಿತವಿಲ್ಲದೇ 10 ಕಾಯಿದೆಗಳನ್ನು ಜಾರಿಗೆ ತಂದಿದೆ.
ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಹೊಸದೇನಲ್ಲ. ಇದೀಗ ಇದು ಇನ್ನೊಂದು ಹಂತಕ್ಕೆ ಹೋಗಿದೆ. ಮೊನ್ನೆಯಷ್ಟೇ ರಾಜ್ಯಪಾಲರು ಸಹಿ ಹಾಕದೇ ಕಡತವಿಟ್ಟುಕೊಂಡಿದ್ದ ವಿಚಾರವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಸರ್ಕಾರಕ್ಕೆ ಗೆಲುವಾಗಿತ್ತು.
ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರು ಸರ್ಕಾರ ಕಳುಹಿಸಿದ ಕಡತಗಳನ್ನು ಸಹಿ ಹಾಕದೇ ಇಟ್ಟುಕೊಳ್ಳುವಂತಿಲ್ಲ. ಆದರೆ ತಮಿಳುನಾಡು ರಾಜ್ಯಪಾಲರು ಈ ರೀತಿ ಕಡತಗಳನ್ನು ಸಹಿ ಹಾಕದೇ ಇಟ್ಟುಕೊಂಡಿದ್ದಕ್ಕೆ ಸುಪ್ರೀಂ ಚಾಟಿ ಬೀಸಿತ್ತು.
ಇದೀಗ ತಮಿಳುನಾಡು ಸರ್ಕಾರ ರಾಜ್ಯಪಲಾರನ್ನು ಧಿಕ್ಕರಿಸಿ ಕಾಯಿದೆಗಳನ್ನು ಜಾರಿಗೆ ತಂದಿದೆ. 2020 ರಿಂದ 2023 ರವರೆಗೆ ಅಂಗೀಕರವಾದ ಮಸೂದೆಗಳನ್ನು ತಮಿಳುನಾಡು ಸರ್ಕಾರ ರಾಜ್ಯಪಾಲರ ಅಂಕಿತವಿಲ್ಲದೇ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಜಾರಿಗೆ ತಂದಿದೆ.