ನವದೆಹಲಿ: ಅಮೆರಿಕಾದಿಂದ ಗಡೀಪಾರಾಗಿ ಭಾರತಕ್ಕೆ ಬಂದಿರುವ ಮುಂಬೈ ದಾಳಿಕೋರ ಉಗ್ರ ತಹವ್ವೂರ್ ನನ್ನು 18 ದಿನಗಳಿಗೆ ಎನ್ಐಎ ವಶಕ್ಕೆ ಒಪ್ಪಿಸಲಾಗಿದ್ದು, ಈಗಾಗಲೇ ಆತನಿಗೆ ಪ್ರಶ್ನೆಗಳ ಸುರಿಮಳೆಗೈಯಲಾಗುತ್ತಿದೆ.
ನಿನ್ನೆ ಸಂಜೆ ತಹಾವ್ವೂರ್ ದೆಹಲಿಯ ಪಾಲಂ ಏರ್ ಬೇಸ್ ಗೆ ಬಂದಿಳಿದಿದ್ದಾನೆ. ಈತನನ್ನು ಬಳಿಕ ಎನ್ಐಎ ಅಧಿಕೃತವಾಗಿ ಬಂಧಿಸಿದ್ದು ಕೋರ್ಟ್ ಗೆ ಹಾಜರುಪಡಿಸಿದೆ. ಕೋರ್ಟ್ ಈತನನ್ನು 18 ದಿನಗಳಿಗೆ ಎನ್ಐಎ ವಶಕ್ಕೊಪ್ಪಿಸಿದೆ.
ಇದೀಗ ಎನ್ಐಎ ಅಧಿಕಾರಿಗಳು ಈತನನ್ನು ತೀವ್ರ ವಿಚಾರಗೊಳಪಡಿಸುತ್ತಿದ್ದಾರೆ. ಮುಂಬೈ ದಾಳಿ ನಡೆಸಲು ಈತ ನಡೆಸಿದ್ದ ಸಂಚಿನ ಸಂಪೂರ್ಣ ವಿವರನ್ನು ಎನ್ಐಎ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಮುಂಬೈ ದಾಳಿಗೆ ಈತ ಹೇಗೆ ಸಂಚು ರೂಪಿಸಿದ್ದ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು 20 ದಿನಗಳಿಗೆ ತಮ್ಮ ಕಸ್ಟಡಿಗೆ ನೀಡುವಂತೆ ದೆಹಲಿ ಕೋರ್ಟ್ ಗೆ ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಕೋರ್ಟ್ 18 ದಿನಗಳಿಗೆ ವಶಕ್ಕೊಪಿಸಿದೆ. ಕೋರ್ಟ್ ನಿಂದ ನೇರವಾಗಿ ಆತನನ್ನು ಭಯೋತ್ಪಾದಕ ನಿಗ್ರಹ ದಳದ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದೆ. ಇಲ್ಲಿಯೇ ಈತನ ವಿಚಾರಣೆ ನಡೆಯುತ್ತಿದೆ.