ನವದೆಹಲಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು ಗುರುವಾರ ಭಾರತಕ್ಕೆ ಹಸ್ತಾಂತರಿಸುತ್ತಿದ್ದ ಹಾಗೇ ಆತ ಪಾಕಿಸ್ತಾನದ ಪ್ರಜೆಯಲ್ಲ ಎನ್ನುವ ಮೂಲಕ ಅಂತರ ಕಾಯ್ದುಕೊಂಡಿದೆ.
ಇಂದು ಅಮೆರಿಕದಿಂದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದ ಹಾಗೇ ಪಾಕಿಸ್ತಾನ ಅಧಿಕಾರಿಗಳು ಮೊದಲ ಬಾರಿಗೆ ಪ್ರತಿಕ್ರಿಯಿಸಿದರು.
2008ರಲ್ಲಿ ಮುಂಬೈನ ಹಲವೆಡೆ ಪಾಕ್ ಉಗ್ರರಿಂದ ನಡೆದ ದಾಳಿಯ ಮಾಸ್ಟರ್ ಮೈಂಡ್ ತಹವ್ವೂರ್ ಹುಸೇನ್ ರಾಣಾನನ್ನು 2009 ರ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ಇದೀಗ ಸತತ ಹೋರಾಟಗಳ ಬಳಿಕ ಮೋಸ್ಟ್ ವಾಟೆಂಡ್ ಉಗ್ರ ರಾಣಾನನ್ನು ಅಮೆರಿಕದಿಂದ ಇಂದು ಹಸ್ತಾಂತರಿಸಲಾಯಿತು.
ಇದೀಗ ಭಾರತದ ಮೇಲಿನ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿಯಾಗಿರುವ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದ ಹಾಗೇ ಪಾಕಿಸ್ತಾನದ ವಿದೇಶಾಂಗ ಕಚೇರಿ ಪ್ರತಿಕ್ರಿಯಿಸಿ, ಆತ ಪಾಕಿಸ್ತಾನದವನಲ್ಲ, ಆತ ಕೆನಡಾದವರು ಎಂದು ಪ್ರತಿಕ್ರಿಯಿಸಿದೆ.
"ಕಳೆದ ಎರಡು ದಶಕಗಳಲ್ಲಿ ತಹವ್ವೂರ್ ರಾಣಾ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಅವರ ಕೆನಡಾದ ರಾಷ್ಟ್ರೀಯತೆ ಬಹಳ ಸ್ಪಷ್ಟವಾಗಿದೆ" ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.